ನವದೆಹಲಿ: ಇನ್ ಕ್ರಿಮೆಂಟ್ ಗಾಗಿ ಕಾಯುತ್ತಿರುವ ಲಕ್ಷಗಟ್ಟಲೆ ಕೇಂದ್ರ ಸರ್ಕಾರಿ ನೌಕರರಿಗೆ ಶೀಘ್ರದಲ್ಲೇ ಸಂಬಳ ಹೆಚ್ಚಿಸುವ ಸಾಧ್ಯತೆಯಿದೆ. ಕೇಂದ್ರ ಸರ್ಕಾರ ಜನವರಿ 26 ರ ಮೊದಲು ಸರ್ಕಾರಿ ನೌಕರರ ವೇತನದಲ್ಲಿ ಹೆಚ್ಚಳ ಘೋಷಿಸಬಹುದು.
ಕೇಂದ್ರ ಸರ್ಕಾರವು ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರ ಫಿಟ್ ಮೆಂಟ್ ಅಂಶದಲ್ಲಿ ಹೆಚ್ಚಳ ಘೋಷಿಸಬಹುದು ಎಂದು ವರದಿಯಾಗಿದೆ. ಫಿಟ್ ಮೆಂಟ್ ಅಂಶದ ಹೆಚ್ಚಳವು ಕೇಂದ್ರ ಸರ್ಕಾರಿ ನೌಕರರ ಕನಿಷ್ಠ ವೇತನ ಹೆಚ್ಚಿಸುತ್ತದೆ.
ಫಿಟ್ ಮೆಂಟ್ ಅಂಶವನ್ನು 2.57 ರಿಂದ 3.68 ಪಟ್ಟು ಹೆಚ್ಚಿಸುವುದರೊಂದಿಗೆ ಕನಿಷ್ಠ ವೇತನ 18,000 ರೂ.ಗಳನ್ನು 26,000 ರೂ.ಗೆ ಹೆಚ್ಚಿಸುವಂತೆ ಕೇಂದ್ರ ಸರ್ಕಾರಿ ನೌಕರರ ಸಂಘಗಳು ದೀರ್ಘಕಾಲದಿಂದ ಕೇಂದ್ರವನ್ನು ಒತ್ತಾಯಿಸುತ್ತಿವೆ.
ಕೇಂದ್ರ ಸರ್ಕಾರವು ಜನವರಿ 26 ರ ಮೊದಲು ಕೇಂದ್ರ ನೌಕರರ ಫಿಟ್ ಮೆಂಟ್ ಅಂಶದ ಕುರಿತು ಹೊಸ ಮಾಹಿತಿ ನೀಡಬಹುದು. ಅಂತೆಯೇ ಸರ್ಕಾರಿ ನೌಕರರು ಗಣರಾಜ್ಯೋತ್ಸವದ ವೇಳೆಗೆ ಒಳ್ಳೆಯ ಸುದ್ದಿ ಸ್ವೀಕರಿಸಬಹುದಾಗಿದೆ.
ಪ್ರಸ್ತುತ, ಕೇಂದ್ರ ಸರ್ಕಾರಿ ನೌಕರರು ಶೇಕಡ 2.57 ರ ಫಿಟ್ ಮೆಂಟ್ ಅಂಶದ ಅಡಿಯಲ್ಲಿ ವೇತನ ಪಡೆಯುತ್ತಿದ್ದಾರೆ. 3.68ಕ್ಕೆ ಫಿಟ್ ಮೆಂಟ್ ಅಂಶ ಹೆಚ್ಚಿಸಬೇಕು ಎಂಬುದು ಒಕ್ಕೂಟಗಳ ಬೇಡಿಕೆಯಾಗಿದೆ.
ಸರ್ಕಾರವು ಫಿಟ್ಮೆಂಟ್ ಅಂಶವನ್ನು ಶೇ 2.57 ರಿಂದ 3.68 ಕ್ಕೆ ಹೆಚ್ಚಿಸಿದರೆ, ಸರ್ಕಾರಿ ನೌಕರರ ಕನಿಷ್ಠ ವೇತನ 8,000 ರೂ., 3.68 ರಷ್ಟು ಫಿಟ್ಮೆಂಟ್ ಅಂಶದ ಮೂಲ ವೇತನ 18,000 ರೂ.ನಿಂದ 26,000 ರೂ.ಗೆ ಹೆಚ್ಚಾಗುತ್ತದೆ.
ಮೂಲ ಲೆಕ್ಕಾಚಾರದ ಪ್ರಕಾರ, ಫಿಟ್ ಮೆಂಟ್ ಅಂಶವನ್ನು ಶೇಕಡ 3.68 ಕ್ಕೆ ಹೆಚ್ಚಿಸಿದಾಗ, ಮೂಲ ವೇತನ 26,000 ರೂ.ಗೆ ಹೆಚ್ಚಾಗುತ್ತದೆ. ಪ್ರಸ್ತುತ, ಕೇಂದ್ರ ಸರ್ಕಾರಿ ನೌಕರರು 2.57 ಫಿಟ್ಮೆಂಟ್ ಅಂಶದ ಪ್ರಕಾರ ಅವರ ಮೂಲ ವೇತನ 18,000 ರೂ. ಆಗಿದ್ದರೆ, 46,260 ರೂ.(18,000 X 2.57 = 46,260) ಮಾಸಿಕ ವೇತನ ಪಡೆಯುತ್ತಾರೆ.