ಕೇಂದ್ರ ಸರ್ಕಾರ ತನ್ನ ನೌಕರರಿಗೆ ಖುಷಿ ಸುದ್ದಿಯನ್ನು ನೀಡಿದೆ. ರಾತ್ರಿ ಪಾಳಿ ಮಾಡುವವರಿಗೆ ನೆಮ್ಮದಿ ಸುದ್ದಿ ನೀಡಿದೆ. ಕೇಂದ್ರ ಸರ್ಕಾರ 7ನೇ ವೇತನ ಆಯೋಗದ ಶಿಫಾರಸ್ಸನ್ನು ಅಂಗೀರಿಸಿದೆ. ಉದ್ಯೋಗಿಗಳಿಗೆ ರಾತ್ರಿ ಕರ್ತವ್ಯ ಭತ್ಯೆ ಪರಿಚಯಿಸಲು ಮುಂದಾಗಿದೆ.
ಜುಲೈ 13ರಂದು ನಿರ್ದೇಶನ ಹೊರಬಿದ್ದಿದ್ದು, ಜುಲೈ 1ರಿಂದಲೇ ಇದು ಜಾರಿಗೆ ಬರಲಿದೆ. ಕೇಂದ್ರ ಸರ್ಕಾರ ರಾತ್ರಿ 10 ರಿಂದ ಬೆಳಿಗ್ಗೆ 6 ರವರೆಗೆ ಕೆಲಸ ಮಾಡುವ ಪಾಳಿಯನ್ನು ರಾತ್ರಿ ಪಾಳಿ ಎಂದು ಪರಿಗಣಿಸಲಿದೆ. ಅವರಿಗೆ ರಾತ್ರಿ ಕರ್ತವ್ಯ ಭತ್ಯೆ ಲಾಭ ಸಿಗಲಿದೆ.
ಗ್ರೇಡ್ ಆಧಾರಿತವಾಗಿ ರಾತ್ರಿ ಕರ್ತವ್ಯ ಮಾಡಲು ನೌಕರರಿಗೆ ವಿಶೇಷ ಭತ್ಯೆ ನೀಡಲಾಗುವುದು. ಹೊಸ ವ್ಯವಸ್ಥೆಯ ನಂತ್ರ ನೌಕರರಿಗೆ ಅನುಕೂಲವಾಗಲಿದೆ. ವೇತನ ಹೆಚ್ಚಾಗಲಿದೆ. ರಾತ್ರಿ ಕರ್ತವ್ಯ ಭತ್ಯೆಗಾಗಿ ಮೂಲ ವೇತನ ಮಿತಿಯನ್ನು ತಿಂಗಳಿಗೆ 43,600 ರೂಪಾಯಿ ನಿಗದಿಪಡಿಸಲಾಗಿದೆ.
ಈ ಭತ್ಯೆಯ ಪಾವತಿಯು ಗಂಟೆಯ ಆಧಾರದ ಮೇಲೆ ಇರುತ್ತದೆ. ಇದು ಮೂಲ ವೇತನ ಮತ್ತು ಡಿಎ ಮೊತ್ತವನ್ನು 200 (ಬಿಪಿ + ಡಿಎ / 200) ರಿಂದ ಭಾಗಿಸುತ್ತದೆ. ಏಳನೇ ವೇತನ ಆಯೋಗದ ಆಧಾರದ ಮೇಲೆ ಮೂಲ ವೇತನ ಮತ್ತು ಪ್ರಿಯ ಭತ್ಯೆಗಳನ್ನು ಲೆಕ್ಕಹಾಕಲಾಗುತ್ತದೆ. ಅದೇ ಸೂತ್ರವನ್ನು ಎಲ್ಲಾ ಸಚಿವಾಲಯಗಳು ಮತ್ತು ಇಲಾಖೆಗಳ ಉದ್ಯೋಗಿಗಳಿಗೆ ಅನ್ವಯಿಸಲಾಗುವುದು.