ಕರೊನಾ ವೈರಸ್ ಸಂಕಷ್ಟದ ನಡುವೆಯೂ ಕೇಂದ್ರ ಸರ್ಕಾರಿ ನೌಕರರಿಗೆ ಶುಭ ಸುದ್ದಿಯೊಂದು ಎದುರಾಗೋ ಸಾಧ್ಯತೆ ಇದೆ. 7ನೇ ವೇತನ ಆಯೋಗದ ಅಡಿಯಲ್ಲಿ ಕೇಂದ್ರವು ತನ್ನ ಸಿಬ್ಬಂದಿಗೆ ಡಿಎಯನ್ನ ಹೆಚ್ಚಿಸೋಕೆ ಚಿಂತನೆ ನಡೆಸಿದೆ ಎನ್ನಲಾಗಿದೆ.
ದೀಪಾವಳಿ ಹಬ್ಬದ ವೇಳೆಗೆ ಕೇಂದ್ರ ಸರ್ಕಾರಿ ನೌಕರರಿಗೆ ವೇತನ ಹೆಚ್ಚಳವಾಗುವ ಸಾಧ್ಯತೆ ಇದೆ. ಕೇಂದ್ರ ಸರ್ಕಾರ ಈ ಕ್ರಮವನ್ನ ಕೈಗೊಂಡ್ರೆ ಇದರಿಂದ 48 ಲಕ್ಷ ಸಿಬ್ಬಂದಿಗೆ ವರದಾನವಾಗಲಿದೆ.
ಗ್ರಾಹಕ ಬೆಲೆ ಸೂಚ್ಯಂಕದ ಮೂಲ ವರ್ಷವನ್ನ ಬದಲಾಯಿಸಲು ಕೇಂದ್ರ ಸರ್ಕಾರ ಯೋಚನೆ ನಡೆಸ್ತಾ ಇರೋದ್ರಿಂದ ಕೇಂದ್ರ ಸರ್ಕಾರದ ನೌಕರರ ವೇತನ ಜಾಸ್ತಿಯಾಗುವ ಸಾಧ್ಯತೆ ದಟ್ಟವಾಗಿದೆ. ಕೈಗಾರಿಕಾ ಕಾರ್ಮಿಕರಿಗಾಗಿ ಕೇಂದ್ರ ಸರ್ಕಾರ ಹೊಸ ಗ್ರಾಹಕ ಬೆಲೆ ಸೂಚ್ಯಂಕ ಸಿದ್ದಪಡಿಸಲಿದೆ. ಗ್ರಾಹಕ ಬೆಲೆ ಸೂಚ್ಯಂಕದ ಮೂಲ ವರ್ಷ ಬಹುಶಃ 2016 ಆಗುವ ಸಾಧ್ಯತೆ ಇದೆ ಕಾರ್ಮಿಕ ಸಚಿವಾಲಯದ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕರೊನಾದಿಂದಾಗಿ ಸರ್ಕಾರ 2021ರ ಜೂನ್ವರೆಗೆ ಡಿಎ ಏರಿಕೆಯನ್ನ ಸ್ಥಗಿತಗೊಳಿಸಿತ್ತು. ಹೀಗಾಗಿ ಕೇಂದ್ರ ನೌಕರರಿಗೆ 17 ಶೇ. ಬಡ್ಡಿದರದಲ್ಲಿ ಮಾತ್ರ ಡಿಎ ಪಾವತಿಯಾಗ್ತಿದೆ.