ಕೇಂದ್ರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರು ಏಳನೇ ವೇತನ ಆಯೋಗದ ವಿಷಯದಲ್ಲಿ ನಿರೀಕ್ಷೆಯ ಬಗ್ಗೆ ಒಂದಷ್ಟು ಮಾಹಿತಿ ಹೊರಬಿದ್ದಿದೆ.
7ನೇ ವೇತನ ಆಯೋಗದ ಲೆಕ್ಕಾಚಾರದ ಮ್ಯಾಟ್ರಿಕ್ಸ್‌ನ ಪ್ರಕಾರ ಜುಲೈ 2021ರಿಂದ ಟಿಎ ಹೆಚ್ಚಳವಾಗಬಹುದೆಂಬ ಊಹಿಸಲಾಗಿತ್ತು. ಆದರೆ ಅದು ಅನ್ವಯವಾಗಲ್ಲ ಎಂಬ ಮಾಹಿತಿ ಬಂದಿದೆ.
ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್: 5,000 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ SBI
ಸಾಮಾನ್ಯವಾಗಿ ಡಿಎಯೊಂದಿಗೆ ಟಿಎ ನೇರ ಸಂಪರ್ಕ ಹೊಂದಿರುತ್ತದೆ ಮತ್ತು ಅದೂ ಏರಿಕೆಯಾಗುತ್ತದೆ ಎಂಬುದು ಸಾಮಾನ್ಯವಾಗಿ ಲೆಕ್ಕಾಚಾರ ಹಾಕಲಾಗುತ್ತದೆ. ಡಿಎ ಶೇ.24 ಅಥವಾ ಅದಕ್ಕಿಂತ ಹೆಚ್ಚಿನದಾಗಿದ್ದಾಗ ಮಾತ್ರ ಈ ರೀತಿ ಮಾಡಲಾಗುತ್ತದೆ. ಕೇಂದ್ರ ಸರ್ಕಾರಿ ನೌಕರರು ಪ್ರಸ್ತುತ ಶೇ.17ರಷ್ಟು ಡಿಎ ಪಡೆದಿದ್ದು, ಈ ಕಾರಣಕ್ಕೆ ಟಿಎ- ಡಿಎ ಒಟ್ಟಿಗೆ ಹೆಚ್ಚಾಗುತ್ತಿಲ್ಲ ಎಂಬ ವಿಶ್ಲೇಷಣೆ ಇದೆ.
ಪ್ರಸ್ತುತ 2021ರ ಜನವರಿಯಿಂದ ಜೂನ್‌ವರೆಗಿನ ಭತ್ಯೆ ಪ್ರಕಟಣೆ ಸಹ ಬಾಕಿ ಇದೆ. ಆದ್ದರಿಂದ, ಕೇಂದ್ರ ಸರ್ಕಾರಿ ನೌಕರರು ದಸರಾ ದೀಪಾವಳಿಗೆ ಡಿಎ ಹೆಚ್ಚಳ ಘೋಷಣೆಯನ್ನು ನಿರೀಕ್ಷಿಸಬಹುದು.