alex Certify ವೇತನ ಹೆಚ್ಚಳದ ನಿರೀಕ್ಷೆಯಲ್ಲಿದ್ದ‌ ಸರ್ಕಾರಿ ನೌಕರರಿಗೆ ʼಬಿಗ್‌ ಶಾಕ್ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೇತನ ಹೆಚ್ಚಳದ ನಿರೀಕ್ಷೆಯಲ್ಲಿದ್ದ‌ ಸರ್ಕಾರಿ ನೌಕರರಿಗೆ ʼಬಿಗ್‌ ಶಾಕ್ʼ

ಕೇಂದ್ರದ ಸರ್ಕಾರಿ ನೌಕರರು ನಿರೀಕ್ಷಿಸುತ್ತಿರುವ ಡಿಎ ಹೆಚ್ಚಳ ಸದ್ಯಕ್ಕೆ ದೂರದ ಮಾತು ಎಂಬ ಮಾಹಿತಿ ಬಂದಿದೆ. ಕೋವಿಡ್ ಸಾಂಕ್ರಾಮಿಕದಿಂದ ದೇಶದ ಪರಿಸ್ಥಿತಿ ಗಂಭೀರ ಇರುವುದರಿಂದ ಡಿಎ ಹೆಚ್ಚಳವು ಮತ್ತಷ್ಟು ವಿಳಂಬವಾಗಲಿದೆ ಎಂದು ಹೇಳಲಾಗುತ್ತಿದೆ.

ಮುಂಬರುವ ಡಿಎ ಹೆಚ್ಚಳವು ಕೇಂದ್ರ ಸರ್ಕಾರಿ ನೌಕರರ ಮೂಲ ವೇತನದ 4 ಪ್ರತಿಶತದವರೆಗೆ ಇರಬಹುದೆಂದು ಅಂದಾಜಿಸಲಾಗಿದ್ದು, ಕೋವಿಡ್ ಪರಿಣಾಮ‌ ತಗ್ಗಿದರೆ ಜೂನ್‌ನಲ್ಲಿ ಘೋಷಣೆಯಾಗಬಹುದು ಎಂದು ಹೇಳಲಾಗುತ್ತಿದೆ.

ಲಸಿಕೆ ಬಗ್ಗೆ ರಾಜ್ಯದ ಜನತೆಗೆ ಗುಡ್ ನ್ಯೂಸ್: ಶಾಲೆ, ಆರೋಗ್ಯ ಕೇಂದ್ರಗಳಲ್ಲೂ ವ್ಯಾಕ್ಸಿನ್

ಹಣಕಾಸು ರಾಜ್ಯ ಸಚಿವ ಅನುರಾಗ್ ಠಾಕೂರ್ ಅವರು ಸಹ ಈ ಹಿಂದೆ ಡಿಎ ಬಿಡುಗಡೆ ಬಗ್ಗೆ ಭರವಸೆ ಮಾತನ್ನಾಡಿದ್ದರು. ಇಲ್ಲಿಯವರೆಗೆ ಜನವರಿ 1, 2020, ಜುಲೈ 1, 2020 ಮತ್ತು ಜನವರಿ 1, 2021 ರಿಂದ ಬಾಕಿ ಉಳಿದಿರುವ ಮೂರು ಡಿಎ ಕಂತುಗಳ ಬಗ್ಗೆ ಯಾವುದೇ ಸ್ಪಷ್ಟತೆ ಬಂದಿಲ್ಲ.

ಒಂದು ವೇಳೆ ಹಳೆಯ ಬಾಕಿಗಳನ್ನು ಪಾವತಿ ಮಾಡಿದರೆ ನೌಕರರು ತಮ್ಮ ಸಂಬಳದಲ್ಲಿ ಭಾರಿ ಏರಿಕೆ ಪಡೆಯುತ್ತಾರೆ. ನೌಕರರ ಡಿಎ ಶೇ. 17ರಿಂದ 28ಕ್ಕೆ ಏರುತ್ತದೆ, ಇದು ವೇತನದಲ್ಲಿ ಪರಿಣಾಮಕಾರಿ ಹೆಚ್ಚಳಕ್ಕೆ ಕಾರಣವಾಗಲಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...