ಕೇವಲ ಹೆಸರಿನ ಸ್ಪೆಲಿಂಗ್ ನಲ್ಲಾದ ತಪ್ಪಿನಿಂದಾಗಿ 70 ಲಕ್ಷ ರೈತರಿಗೆ ಕೇಂದ್ರ ಸರ್ಕಾರದ ಹಣ ಸಿಕ್ಕಿಲ್ಲ. ಯಸ್, ದಾಖಲೆಯ ಅವ್ಯವಸ್ಥೆಯಿಂದಾಗಿ ಸುಮಾರು 4200 ಕೋಟಿ ರೂಪಾಯಿ ರೈತರಿಗೆ ಸಿಕ್ಕಿಲ್ಲ. ಈ ತಪ್ಪು ಸರಿಯಾಗುವವರೆಗೂ ರೈತರಿಗೆ ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಹಣವನ್ನು ಪಡೆಯಲು ಸಾಧ್ಯವಾಗುವುದಿಲ್ಲ.
ಬ್ಯಾಂಕ್ ಖಾತೆ ಸಮಸ್ಯೆ, ಬ್ಯಾಂಕ್ ಹಾಗೂ ವಿವಿಧ ದಾಖಲೆಗಳ ಹೆಸರಿನಲ್ಲಿರುವ ಸಣ್ಣ ತಪ್ಪುಗಳು ರೈತರಿಗೆ ಹಣ ಸಿಗಲು ಅಡ್ಡಿಯಾಗ್ತಿದೆ. ಇಂತಹ ತಪ್ಪುಗಳನ್ನು ಮಾಡಿರುವ ಅರ್ಜಿದಾರ ರೈತರ ಸಂಖ್ಯೆ ಸುಮಾರು 70 ಲಕ್ಷ. ಸುಮಾರು 60 ಲಕ್ಷ ಜನರ ಆಧಾರ್ ಕಾರ್ಡ್‌ನಲ್ಲಿ ದೋಷವಿರುವುದು ಪತ್ತೆಯಾಗಿದೆ.
ಇದೆಲ್ಲವನ್ನು ಹೊರತುಪಡಿಸಿಯೂ ದೇಶಾದ್ಯಂತ ಸುಮಾರು 1.3 ಕೋಟಿ ರೈತರು ವಾರ್ಷಿಕವಾಗಿ 6000 ರೂಪಾಯಿಗಳ ಲಾಭ ಪಡೆಯಲು ವಂಚಿತರಾಗಿದ್ದಾರೆ. ಕೆಲ ಜಿಲ್ಲೆಗಳಲ್ಲಿ ರೈತರ ದಾಖಲೆ ಪರಿಶೀಲನೆ ದೊಡ್ಡ ಮಟ್ಟದಲ್ಲಿ ಬಾಕಿ ಇದೆ. ಸಾಮಾನ್ಯವಾಗಿ ರಾಜ್ಯ ಸರ್ಕಾರ ರೈತನ ಡೇಟಾವನ್ನು ಪರಿಶೀಲಿಸಿ ಅದನ್ನು ಕೇಂದ್ರಕ್ಕೆ ಕಳುಹಿಸಿದಾಗ, ರೈತನಿಗೆ ಹಣ ಸಿಗುತ್ತದೆ.