
ಕೊರೊನಾ ಸಂದರ್ಭದಲ್ಲಿ ಸ್ಕೂಟರ್ ಖರೀದಿ ಮಾಡುವವರಿಗೊಂದು ಖುಷಿ ಸುದ್ದಿಯಿದೆ. Techo Electra ಟೆಕೊ ಎಲೆಕ್ಟ್ರಾ ಸಾಥಿ ಹೆಸರಿನ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದೆ. ಪುಣೆ ಮೂಲದ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿ ಇದನ್ನು ತಯಾರಿಸಿದೆ.
ಟೆಕೊ ಎಲೆಕ್ಟ್ರಾ ಸಾಥಿ ಎಲೆಕ್ಟ್ರಿಕ್ ಮೊಪೆಡ್ ಬೆಲೆ 57,697 ರೂಪಾಯಿ. ಗ್ರಾಹಕರು ಈ ಉತ್ತಮ ಸ್ಕೂಟರ್ ಅನ್ನು ಕಂಪನಿಯ ವೆಬ್‌ಸೈಟ್‌ನಿಂದ ಅಥವಾ +91 9540569569 ಸಂಖ್ಯೆಯನ್ನು ಡಯಲ್ ಮಾಡುವ ಮೂಲಕ ಬುಕ್ ಮಾಡಬಹುದು. ಟೆಕೊ ಎಲೆಕ್ಟ್ರಾ ಸಾಥಿ ವಿತರಣೆ ಸೆಪ್ಟೆಂಬರ್ ಎರಡನೇ ವಾರದಲ್ಲಿ ಪ್ರಾರಂಭವಾಗಲಿದೆ.
ಇದು ಸಾಕಷ್ಟು ವೈಶಿಷ್ಟ್ಯಗಳನ್ನು ಹೊಂದಿದೆ. ಮೊಪೆಡ್ ಅನ್ನು ಚಾರ್ಜ್ ಮಾಡಲು ಕೇವಲ 1.5 ಯುನಿಟ್ ವಿದ್ಯುತ್ ಸಾಕೆಂದು ಕಂಪನಿ ಹೇಳಿದೆ. ಇದು ಕೇವಲ 12 ರೂಪಾಯಿ ವೆಚ್ಚದಲ್ಲಿ 60 ಕಿಲೋಮೀಟರ್ ಓಡಲಿದೆಯಂತೆ. ಅದರ ಉನ್ನತ ವೇಗ ಗಂಟೆಗೆ 25 ಕಿಲೋಮೀಟರ್.