ಬೆಂಗಳೂರು : 6 ‘IAS’ ಅಧಿಕಾರಿಗಳಿಗೆ ಬಿಬಿಎಂಪಿಯಲ್ಲಿ ಹೆಚ್ಚುವರಿ ಜವಾಬ್ದಾರಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಐಎಎಸ್ ಅಧಿಕಾರಿ ಮುನೀಶ್ ಮೌದ್ಗಿಲ್ ಸೇರಿದಂತೆ 6 ಐಎಎಸ್ ಅಧಿಕಾರಿಗಳಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ. ಮುನೀಶ್ ಮೌದ್ಗಿಲ್ ಅವರು ಈ ಹಿಂದೆ ಸರ್ವೆ, ಸೆಟ್ಲ್ಮೆಂಟ್ ಮತ್ತು ಭೂ ದಾಖಲೆಗಳ ಆಯುಕ್ತರಾಗಿ ಸೇವೆ ಸಲ್ಲಿಸಿದ ಅನುಭವನ್ನು ಹೊಂದಿದ್ದಾರೆ.
ಬಿಬಿಎಂಪಿ ದಕ್ಷಿಣ ವಲಯ ಆಯುಕ್ತರಾಗಿ ವಿನೋತ್ ಪ್ರಿಯಾ, ಯಲಹಂಕ ವಲಯ ಆಯುಕ್ತರಾಗಿ ಕರಿಗೌಡ, ಪೂರ್ವ ವಲಯ ಆಯುಕ್ತರಾಗಿ ಆರ್. ಸ್ನೇಹಲ್, ದಾಸರಹಳ್ಳಿ ವಲಯ ಆಯುಕ್ತರಾಗಿ ಪ್ರೀತಿ ಗೆಹ್ಲೊಟ್, ಮಹದೇವಪುರ ವಲಯ ಆಯುಕ್ತರಾಗಿ ಇಬ್ರಾಹಿಂ ಮೈಗೂರು ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.