ನವದೆಹಲಿ: 5G ಸ್ಪೆಕ್ಟ್ರಮ್ ಹರಾಜು ಒಟ್ಟು 1,50,173 ಕೋಟಿ ರೂ.ಗಳ ಬಿಡ್ ಮೊತ್ತದೊಂದಿಗೆ ಯಶಸ್ವಿಯಾಗಿ ಮುಕ್ತಾಯಗೊಂಡಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
72,098 MHz ತರಂಗಾಂತರವನ್ನು ಹರಾಜಿಗೆ ನೀಡಲಾಗಿದೆ. ಅದರಲ್ಲಿ 51,236 MHz ಮಾರಾಟವಾಗಿದೆ. ಬಿಡ್ ಮಾಡಿದ ಒಟ್ಟು ಸ್ಪೆಕ್ಟ್ರಮ್‌ನ 71% ಮಾರಾಟವಾಗಿದೆ. ಆಪರೇಟರ್ ವೈಸ್ ಕ್ವಾಂಟಮ್ – ಅದಾನಿ ಡೇಟಾ ನೆಟ್‌ವರ್ಕ್ಸ್ ಲಿಮಿಟೆಡ್, ಭಾರ್ತಿ ಏರ್‌ಟೆಲ್ Ltd, ರಿಲಯನ್ಸ್ ಜಿಯೋ ಇನ್ಫೋಕಾಮ್ ಭಾಗಿಯಾಗಿವೆ.
ಅದಾನಿ ಡಾಟಾ ನೆಟ್‌ವರ್ಕ್ಸ್ ಲಿಮಿಟೆಡ್ 212 ಕೋಟಿ ರೂ., ಭಾರ್ತಿ ಏರ್‌ಟೆಲ್ ಲಿಮಿಟೆಡ್ 43,084 ಕೋಟಿ ರೂ., ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್ 88,078 ಕೋಟಿ ರೂ. ಮತ್ತು ವೊಡಾಫೋನ್-ಐಡಿಯಾ ಲಿಮಿಟೆಡ್ 18,799 ಕೋಟಿ ರೂ.ಗೆ ಬಿಡ್ ಪಡೆದಿವೆ ಎನ್ನಲಾಗಿದೆ.