
ನವದೆಹಲಿ: ಈ ತಿಂಗಳಿನಲ್ಲಿಯೇ ದೇಶಾದ್ಯಂತ ಏರ್ಟೆಲ್ 5ಜಿ ಸೇವೆ ಆರಂಭಿಸಲಾಗುವುದು. ಮಾರ್ಚ್ 2024ರ ವೇಳೆಗೆ ದೇಶದ ಎಲ್ಲಾ ಪಟ್ಟಣ ಮತ್ತು ಪ್ರಮುಖ ಹಳ್ಳಿಗಳಿಗೆ 5ಜಿ ಸೇವೆ ವಿಸ್ತರಿಸಲಾಗುವುದು.
ಭಾರತಿ ಏರ್ಟೆಲ್ ವತಿಯಿಂದ ಹೇಳಿಕೆ ಬಿಡುಗಡೆ ಮಾಡಲಾಗಿದ್ದು, ದೇಶದ ಐದು ಸಾವಿರ ನಗರ, ಪಟ್ಟಣಗಳಿಗೆ 5ಜಿ ನೆಟ್ವರ್ಕ್ ಒದಗಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಈ ತಿಂಗಳಲ್ಲೇ ಸೇವೆ ಆರಂಭವಾಗಲಿದೆ ಎಂದು ಸಂಸ್ಥೆಯ ಸಿಇಓ ಗೋಪಾಲ್ ವಿಠ್ಠಲ್ ಮಾಹಿತಿ ನೀಡಿದ್ದಾರೆ.