ಟೆಲಿಕಾಂ ಕಂಪನಿ ಮಧ್ಯೆ ನಿರಂತರ ಸ್ಪರ್ಧೆಯಿದೆ. ಪ್ರತಿ ಕಂಪನಿ ತನ್ನ ಗ್ರಾಹಕರನ್ನು ಸೆಳೆಯಲು ಉತ್ತಮ ಯೋಜನೆಗಳನ್ನು ಜಾರಿಗೆ ತರ್ತಿದೆ. ಏರ್ಟೆಲ್, ಜಿಯೋ, ವೋಡಾಫೋನ್ ಗ್ರಾಹಕರನ್ನು ಸೆಳೆಯಲು ಕಡಿಮೆ ಬೆಲೆಯ ಪ್ಲಾನ್ ಜಾರಿಗೆ ತರ್ತಿದೆ.
ಇದ್ರಲ್ಲಿ ಬಿಎಸ್ಎನ್ಎಲ್ ಕೂಡ ಹಿಂದೆ ಬಿದ್ದಿಲ್ಲ. ಬಿಎಸ್ಎನ್ಎಲ್ 599 ರೂಪಾಯಿ ಯೋಜನೆಯನ್ನು ಗ್ರಾಹಕರಿಗೆ ನೀಡ್ತಿದೆ.
ಬಿಎಸ್ಎನ್ಎಲ್ ನ 599 ರೂಪಾಯಿ ಈ ಪ್ಲಾನ್ 84 ದಿನಗಳ ಮಾನ್ಯತೆ ಹೊಂದಿದೆ. ಪ್ರತಿ ದಿನ 5ಜಿಬಿ ಡೇಟಾ ಗ್ರಾಹಕರಿಗೆ ಲಭ್ಯವಾಗಲಿದೆ. ಯೋಜನೆಯಡಿ ಗ್ರಾಹಕರಿಗೆ 420 ಜಿಬಿ ಡೇಟಾ ಸಿಗಲಿದೆ. ಈ ಪ್ಲಾನ್ ನಲ್ಲಿ ಗ್ರಾಹಕರಿಗೆ ಅನಿಯಮಿತ ಕರೆ ಮತ್ತು ಸೀಮಿತ ಎಸ್ಎಂಎಸ್ ಸೌಲಭ್ಯ ಸಿಗಲಿದೆ. ಕಂಪನಿಯ ವೆಬ್ಸೈಟ್ ನೀಡಿದ ಮಾಹಿತಿ ಪ್ರಕಾರ, ಇತರ ನೆಟ್ವರ್ಕ್ ಗೆ ಪ್ರತಿ ದಿನ 250 ನಿಮಿಷಗಳ ಕರೆ ಸೌಲಭ್ಯ ಸಿಗಲಿದೆ. ಮನೆಯಿಂದಲೇ ಕೆಲಸ ಮಾಡುವ ಗ್ರಾಹಕರಿಗೆ ಇದು ಉತ್ತಮ ಆಯ್ಕೆಯಾಗಿದೆ.
ಹೊಸ ವರ್ಷದಲ್ಲಿ ಬಿ ಎಸ್ ಎನ್ ಎಲ್ ಅನೇಕ ಹೊಸ ಯೋಜನೆಗಳನ್ನು ಪರಿಚಯಿಸಿದೆ. ಕರ್ನಾಟಕ, ಕೇರಳ, ಆಂಧ್ರ, ತೆಲಂಗಾಣ, ಮಧ್ಯಪ್ರದೇಶದ ಕೆಲ ಭಾಗಗಳಲ್ಲಿ ಬಿಎಸ್ಎನ್ಎಲ್ 4ಜಿ ಸೇವೆಯನ್ನು ಶುರು ಮಾಡಿದೆ.