ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ತೀವ್ರ ಕುಸಿತ ಕಂಡಿದ್ದ ಆರ್ಥಿಕತೆಯು ಈಗ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಈ ಮಧ್ಯೆ ಅಧ್ಯಯನವೊಂದು ಉದ್ಯೋಗಿಗಳಿಗೆ ಖುಷಿ ಸುದ್ದಿ ನೀಡಿದೆ. ಭಾರತದಲ್ಲಿ ಶೇಕಡಾ 59 ಕಂಪನಿಗಳು 2021ರಲ್ಲಿ ಉದ್ಯೋಗಿಗಳ ವೇತನ ಹೆಚ್ಚಳಕ್ಕೆ ನಿರ್ಧರಿಸಿವೆ ಎಂದು ಅಧ್ಯಯನದ ವರದಿ ಹೇಳಿದೆ.
ಉದ್ಯೋಗಿಗಳ ವೇತನ ಹೆಚ್ಚಳದ ಬಗ್ಗೆ ಕಂಪನಿಗಳ ಅಭಿಪ್ರಾಯ ಭಿನ್ನವಾಗಿದೆ. ಶೇಕಡಾ 20ರಷ್ಟು ಕಂಪನಿಗಳು ವೇತನ ಹೆಚ್ಚಳ ಶೇಕಡಾ 5ಕ್ಕಿಂತ ಕಡಿಮೆ ಇರುತ್ತದೆ ಎಂದಿದೆ. ಶೇಕಡಾ 30ರಷ್ಟು ಕಂಪನಿಗಳು ಶೇಕಡಾ 5ರಿಂದ 10ರೊಳಗೆ ವೇತನ ಹೆಚ್ಚಳ ಮಾಡುವುದಾಗಿ ಹೇಳಿವೆ. ಶೇಕಡಾ 21ರಷ್ಟು ಕಂಪನಿಗಳು 2021ರಲ್ಲಿ ಸಂಬಳ ಹೆಚ್ಚಳ ಮಾಡದಿರಲು ನಿರ್ಧರಿಸಿವೆ.
ಫೆಬ್ರವರಿ ಮತ್ತು ಮಾರ್ಚ್ ಅವಧಿಯಲ್ಲಿ ಬ್ಯಾಂಕಿಂಗ್ ಮತ್ತು ಹಣಕಾಸು, ಎಂಜಿನಿಯರಿಂಗ್, ಶಿಕ್ಷಣ, ಎಫ್‌ಎಂಸಿಜಿ, ಮಾನವ ಸಂಪನ್ಮೂಲ ಪರಿಹಾರಗಳು, ಐಟಿ, ಐಟಿಇಎಸ್ ಮತ್ತು ಬಿಪಿಒ, ಲಾಜಿಸ್ಟಿಕ್ಸ್, ಉತ್ಪಾದನೆ, ಮಾಧ್ಯಮ, ತೈಲ ಕಂಪನಿ ಸೇರಿದಂತೆ 1,200 ಕಂಪನಿಗಳಲ್ಲಿ ಈ ಅಧ್ಯಯನವನ್ನು ಆನ್‌ಲೈನ್‌ನಲ್ಲಿ ನಡೆಸಲಾಯಿತು.