
50 ವರ್ಷ ಮೇಲ್ಪಟ್ಟ ಸರ್ಕಾರಿ ಉದ್ಯೋಗಿಗಳಿಗೆ ಈಗ ನಡುಕ ಶುರುವಾಗಿದೆ. ಸರ್ಕಾರಿ ಕೆಲಸ ಖಾಯಂ ಕೆಲಸ ಎಂಬ ಅಭಿಪ್ರಾಯವಿದೆ. ನಿವೃತ್ತಿಯವರೆಗೆ ಯಾವುದೇ ಕೆಲಸ ಕಳೆದುಕೊಳ್ಳುವ ಭಯವಿಲ್ಲದೆ ಇಲ್ಲಿ ಕೆಲಸ ಮಾಡಬಹುದು ಎಂಬ ನಂಬಿಕೆಯಿದೆ. ಆದ್ರೆ ಮೋದಿ ಸರ್ಕಾರ ಬೇರೆ ಪ್ಲಾನ್ ಮಾಡಿದೆ.
50 ವರ್ಷ ಮೇಲ್ಪಟ್ಟ ಸರ್ಕಾರಿ ನೌಕರರ ಕಾರ್ಯಕ್ಷಮತೆ ಮೇಲೆ ಕಣ್ಣಿಟ್ಟಿದೆ. ಸತತ ಮೂರು ತಿಂಗಳಿಗೊಮ್ಮೆ ಅವರ ಕಾರ್ಯವೈಖರಿ ಬಗ್ಗೆ ಪರಿಶೀಲಿಸುವಂತೆ ಎಲ್ಲ ಸಚಿವಾಲಯ, ಇಲಾಖೆಗೆ ಸೂಚನೆ ನೀಡಿದೆ. ಒಂದು ವೇಳೆ ನೌಕರರ ಕಾರ್ಯಕ್ಷಮತೆ ಉತ್ತಮವಾಗಿಲ್ಲದಿದ್ದರೆ, ಅಂತಹ ಉದ್ಯೋಗಿಗಳನ್ನು ಉದ್ಯೋಗದಿಂದ ತೆಗೆದುಹಾಕುವ ತಯಾರಿ ನಡೆಸಿದೆ.
ಈ ಆದೇಶದ ಪ್ರಕಾರ, ಎಲ್ಲಾ ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳು ರಿಜಿಸ್ಟರ್ ಸಿದ್ಧಪಡಿಸಬೇಕು. ಇದು 50/55 ವರ್ಷ ದಾಟಿದ ನೌಕರರ ವಿವರಗಳನ್ನು ಒಳಗೊಂಡಿರುತ್ತದೆ. ಇವರು ಮೂವತ್ತು ವರ್ಷಗಳ ಸೇವೆ ಪೂರ್ಣಗೊಳಿಸಿರಬೇಕಾಗುತ್ತದೆ. ನೌಕರ ಕಾರ್ಯಕ್ಷಮತೆಯಲ್ಲಿ ದುರ್ಬಲನಾಗಿ ಕಂಡುಬಂದರೆ, ಅವನ ಸೇವೆಗಳನ್ನು ಕೊನೆಗೊಳಿಸಲಾಗುವುದು.