ಕ್ರೆಡಿಟ್ ವರದಿಗಳನ್ನು ಆಧರಿಸಿ ಖಾತೆದಾರರು ಸಾಲ ಹಾಗೂ ಕ್ರೆಡಿಟ್ ಪಡೆಯಲು ಎಷ್ಟರ ಮಟ್ಟಿಗೆ ಅರ್ಹರು ಎಂದು ಬ್ಯಾಂಕುಗಳು ಹಾಗೂ ವಿತ್ತೀಯ ಸೇವೆಗಳ ಇತರೆ ಸಂಸ್ಥೆಗಳು ಮೌಲ್ಯಮಾಪನ ಮಾಡುತ್ತವೆ.
ಸಾಲದ ಮೊತ್ತ, ಅದರ ಮೇಲಿನ ಬಡ್ಡಿ ದರ ಲೆಕ್ಕಾಚಾರ ಮಾಡಲು ಈ ಮಾಹಿತಿಗಳು ನೆರವಾಗುತ್ತವೆ. ನಿಮ್ಮ ಕ್ರೆಡಿಟ್ ವರದಿ ಹಾಗೂ ಕ್ರೆಡಿಟ್ ಸ್ಕೋರ್‌ಗಳನ್ನು ಪದೇ ಪದೇ ಪರೀಕ್ಷಿಸಿಕೊಳ್ಳುವುದು ಉತ್ತಮ.
ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ನಿಗಾ ಇಡಲು ನೀವೇನು ಮಾಡಬೇಕು?
ಭರ್ಜರಿ ಗುಡ್ ನ್ಯೂಸ್: ಈ ಯೋಜನೆಯಲ್ಲಿ 1,500 ರೂ. ಹೂಡಿಕೆ ಮಾಡಿದ್ರೆ ಸಿಗುತ್ತೆ 35 ಲಕ್ಷ ರೂ….!
ಕ್ರೆಡಿಟ್ ಖಾತೆಗಳು:
ಕ್ರೆಡಿಟ್ ವರದಿಯಲ್ಲಿ ನಿಮ್ಮ ಸಕ್ರಿಯ ಹಾಗೂ ಇತ್ತೀಚೆಗೆ ನಿಷ್ಕ್ರಿಯವಾಗಿರುವ ಕ್ರೆಡಿಟ್ ಖಾತೆಗಳನ್ನು ಪಟ್ಟಿ ಮಾಡಲಾಗಿರುತ್ತದೆ. ಕ್ರೆಡಿಟ್ ಪಡೆಯಲು ನಿಮ್ಮ ಅರ್ಹತೆಯ ಮೌಲ್ಯಮಾಪನ ಮಾಡಲು ಸಾಲ ನೀಡುವವರು ಮುಂದಾಗುತ್ತಾರೆ. ಹೀಗಾಗಿ ನಿಮ್ಮ ಕ್ರೆಡಿಟ್ ವರದಿಯಲ್ಲಿ ನಿಮ್ಮ ಸಾಲ ಹಾಗೂ ಕ್ರೆಡಿಟ್ ಕಾರ್ಡ್ ವಿವರಗಳು ಅಪ್ಡೇಟ್ ಆಗಿರುತ್ತವೆ ಎಂದು ನೀವು ಖಾತ್ರಿ ಮಾಡಿಕೊಳ್ಳಬೇಕಾಗುತ್ತದೆ.
ಮರುಪಾವತಿ ಇತಿಹಾಸ:
ನಿಮ್ಮ ಸಾಲದ ಕಂತುಗಳು ಹಾಗೂ ಕ್ರೆಡಿಟ್ ಕಾರ್ಡ್ ಬಿಲ್‌ಗಳ ವಿವರಗಳನ್ನು ಈ ಸೆಕ್ಷನ್ ಹೊಂದಿರುತ್ತದೆ. ನಿಮ್ಮ ಮರುಪಾವತಿಯ ವರ್ತನೆಯನ್ನು ಸಹ ಸಾಲ ನೀಡುವವರು ಗಮನಿಸುತ್ತಾರೆ.
ವೈಯಕ್ತಿಕ ವಿವರಗಳು:
ಈ ವಿಭಾಗದಲ್ಲಿ ನಿಮ್ಮ ಹೆಸರು, ಪಾನ್, ಮೊಬೈಲ್ ಸಂಖ್ಯೆ, ಸಂಪರ್ಕ, ವಿಳಾಸ ಸೇರಿದಂತೆ ವೈಯಕ್ತಿಕ ವಿವರಗಳು ಇರುತ್ತವೆ. ನಿಮ್ಮ ಕ್ರೆಡಿಟ್ ವರದಿಯಲ್ಲಿ ಈ ಸಂಬಂಧ ಯಾವುದಾದರೂ ಲೋಪಗಳಿದ್ದರೆ ಸಾಲ ಅಥವಾ ಕ್ರೆಡಿಟ್ ಕಾರ್ಡ್ ಪಡೆಯುವ ಸಾಧ್ಯತೆಗಳು ಕಡಿಮೆಯಾಗುತ್ತವೆ.
ಕ್ರೆಡಿಟ್ ಬಳಕೆ ಅನುಪಾತ:
ನಿಮಗೆ ಅನುಮೋದಿಸಲಾದ ಕ್ರೆಡಿಟ್ ಮೊತ್ತದಲ್ಲಿ ಎಷ್ಟನ್ನು ಬಳಸಿಕೊಂಡಿದ್ದೀರಿ ಎಂಬ ವಿವರವೇ ಕ್ರೆಡಿಟ್ ಬಳಕೆ ಅನುಪಾತ (ಸಿಯುಆರ್). ನಿಮ್ಮ ಸಿಯುಆರ್ 30%ನ ಒಳಗೆ ಇರುವ ಮಂದಿಗೆ ಸಾಲ ನೀಡುವ ವಿಚಾರದಲ್ಲಿ ಬ್ಯಾಂಕುಗಳು ಆದ್ಯತೆ ನೀಡುತ್ತವೆ.