ಬಿಎಸ್ಎನ್ಎಲ್ ತನ್ನ ಗ್ರಾಹಕರಿಗೆ ಹೊಸ ರೀಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದೆ. ಅದರ ಬೆಲೆ 399 ರೂಪಾಯಿ. ಈ ಪ್ಲಾನ್ 80 ದಿನಗಳ ಸಿಂಧುತ್ವ ಹೊಂದಿದೆ. ಈ ಪ್ಲಾನ್ ನಲ್ಲಿ ಪ್ರತಿ ದಿನ 1 ಜಿಬಿ ಡೇಟಾ ಲಭ್ಯವಾಗಲಿದೆ.
ಬಿಎಸ್ಎನ್ಎಲ್ 399 ರೂಪಾಯಿ ಈ ಯೋಜನೆಯಲ್ಲಿ ಧ್ವನಿ ಕರೆಗಾಗಿ ಪ್ರತಿದಿನ 250 ನಿಮಿಷಗಳನ್ನು ನೀಡಲಾಗ್ತಿದೆ. ಈ ಯೋಜನೆ ಆಗಸ್ಟ್ 15ರಿಂದ ಪ್ರಾರಂಭವಾಗಲಿದೆ. ಸದ್ಯ ಚೆನ್ನೈ, ತಮಿಳುನಾಡಿನಲ್ಲಿ ಈ ಪ್ಲಾನ್ ಸಿಗಲಿದೆ.
ಯೋಜನೆಯಲ್ಲಿ ಗ್ರಾಹಕರಿಗೆ ಪ್ರತಿದಿನ 1 ಜಿಬಿ ಹೈಸ್ಪೀಡ್ ಡೇಟಾ ಸಿಗಲಿದೆ. ಮಿತಿಯನ್ನು ತಲುಪಿದ ನಂತರ ಡೇಟಾ ವೇಗವನ್ನು 80 ಕೆಬಿಪಿಎಸ್ಗೆ ಇಳಿಸಲಾಗುತ್ತದೆ. ಪ್ರತಿ ದಿನ 100 ಎಸ್ಎಂಎಸ್ ನೀಡಲಾಗುತ್ತಿದೆ.