ದೀಪಾವಳಿ ಹಬ್ಬ ಬಂತು ಅಂದ್ರೆ ಸಾಕು ಚೀನಿ ಪಟಾಕಿ, ಹಣತೆಗಳಿಗೆ ನಮ್ಮ ದೇಶದಲ್ಲಿ ಫುಲ್ ಡಿಮ್ಯಾಂಡ್ ಶುರುವಾಗುತ್ತೆ. ಆದರೆ ಈ ಬಾರಿ ಚೀನಿ ಉತ್ಪನ್ನಗಳಿಗೆ ಟಕ್ಕರ್ ಕೊಡಲು ನಿರ್ಧರಿಸಿರೋ ರಾಷ್ಟ್ರೀಯ ಕಾಮಧೇನು ಆಯೋಗ 33 ಕೋಟಿ ಪರಿಸರ ಸ್ನೇಹಿ ಹಣತೆಯನ್ನ ಹಸುವಿನ ಸಗಣಿ ಬಳಸಿ ತಯಾರಿಸಿದೆ.
ದೇಶಾದ್ಯಂತ ಕಾಮಧೇನು ದೀಪಾವಳಿ ಅಭಿಯಾನ ನಡೆಸುತ್ತಿರೋ ಕಾಮಧೇನು ಆಯೋಗ ಈ ಮೂಲಕ ಸಗಣಿಯಿಂದ ತಯಾರಾದ ವಸ್ತುಗಳನ್ನ ಪ್ರಚಾರ ಮಾಡುತ್ತಿದೆ. ಈ ಮೂಲಕ ಮೇಕ್ ಇನ್ ಇಂಡಿಯಾ ಯೋಜನೆಗೂ ಕಾಮಧೇನು ಆಯೋಗ ಬೆಂಬಲ ನೀಡಿದೆ.
ಇನ್ನು ಈ ವಿಚಾರವಾಗಿ ಮಾತನಾಡಿದ ಕಾಮಧೇನು ಆಯೋಗದ ಚೇರ್ಮನ್ ಕಠಾರಿಯಾ 15ಕ್ಕೂ ಹೆಚ್ಚು ರಾಜ್ಯಗಳು ನಮ್ಮ ಅಭಿಯಾನದೊಂದಿಗೆ ಕೈಜೋಡಿಸಿವೆ. 3 ಲಕ್ಷ ಹಣತೆಗಳನ್ನ ನಾವು ಅಯೋಧ್ಯೆಯಲ್ಲಿ , 1 ಲಕ್ಷ ಹಣತೆಗಳನ್ನ ವಾರಣಾಸಿಯಲ್ಲಿ ಬೆಳಗಿಸಲಿದ್ದೇವೆ. ಈಗಾಗಲೇ ಹಣತೆಗಳನ್ನ ತಯಾರು ಮಾಡುವ ಪ್ರಕ್ರಿಯೆ ಆರಂಭವಾಗಿದ್ದು 33 ಕೋಟಿ ಹಣತೆ ತಯಾರಿಸೋ ಗುರಿ ಹೊಂದಿದ್ದೇವೆ ಅಂತಾ ಹೇಳಿದ್ರು.