ಟೆಲಿಕಾಂ ಕಂಪನಿಗಳ ಮಧ್ಯೆ ಸದಾ ಬೆಲೆ ಸ್ಪರ್ಧೆಯಿದೆ. ಗ್ರಾಹಕರಿಗೆ ಅನುಕೂಲವಾಗುವ ಅನೇಕ ಯೋಜನೆಗಳನ್ನು ಕಂಪನಿಗಳು ಆಗಾಗ ಬಿಡುಗಡೆ ಮಾಡ್ತಿರುತ್ತವೆ. ಇಂದು ನಾವು ರಿಲಾಯನ್ಸ್ ಜಿಯೋ, ವೊಡಾಫೋನ್ ಐಡಿಯಾ ಹಾಗೂ ಏರ್ಟೆಲ್ ನ ಕೆಲ ಪ್ಲಾನ್ ಗಳ ಬಗ್ಗೆ ಹೇಳ್ತೆವೆ. ಈ ಕಂಪನಿಗಳು 4ಜಿಬಿ ಡೇಟಾದೊಂದಿಗೆ ಉಚಿತ ಕರೆ ಸೌಲಭ್ಯ ನೀಡ್ತಿವೆ.
ವೊಡಾಫೋನ್-ಐಡಿಯಾ 299 ರೂಪಾಯಿಗಳ ಪ್ಲಾನ್ ಗ್ರಾಹಕರಿಗೆ ನೀಡ್ತಿದೆ. ಈ ಯೋಜನೆಯಲ್ಲಿ ಪ್ರತಿದಿನ 2 ಜಿಬಿ ಡೇಟಾ ಲಭ್ಯವಿದೆ. ಆದರೆ ಕಂಪನಿಯು ಪ್ರಸ್ತುತ ಈ ಯೋಜನೆಯನ್ನು ಡಬಲ್ ಡೇಟಾ ಕೊಡುಗೆ ಅಡಿಯಲ್ಲಿ ನೀಡ್ತಿದೆ. ಈ ಯೋಜನೆಯನ್ನು ರೀಚಾರ್ಜ್ ಮಾಡುವ ಗ್ರಾಹಕರು ಪ್ರತಿದಿನ 4 ಜಿಬಿ ಡೇಟಾವನ್ನು ಪಡೆಯಲಿದ್ದಾರೆ. ಈ ಯೋಜನೆಯಲ್ಲಿ ಅನಿಯಮಿತ ಉಚಿತ ಕರೆ ಲಭ್ಯವಿದೆ.ಇದು 28 ದಿನಗಳ ಸಿಂಧುತ್ವ ಹೊಂದಿದೆ.
ಏರ್ಟೆಲ್ 298 ರೂಪಾಯಿಗಳ ಪ್ಲಾನ್ ನೀಡ್ತಿದೆ. ಬಳಕೆದಾರರು ಪ್ರತಿದಿನ 2 ಜಿಬಿ ಡೇಟಾವನ್ನು ಈ ಪ್ಲಾನ್ ನಲ್ಲಿ ಪಡೆಯುತ್ತಾರೆ. ಏರ್ಟೆಲ್‌ನ ಈ ಯೋಜನೆ 28 ದಿನಗಳ ಸಿಂಧುತ್ವ ಹೊಂದಿದೆ. ದೇಶಾದ್ಯಂತದ ಯಾವುದೇ ನೆಟ್‌ವರ್ಕ್‌ನಲ್ಲಿ ಅನಿಯಮಿತ ಕರೆ ಮಾಡಬಹುದು. ಪ್ರತಿದಿನ 100 ಉಚಿತ ಎಸ್‌ಎಂಎಸ್ ಮತ್ತು ಏರ್ಟೆಲ್ ಎಕ್ಸ್ ಟ್ರೀಮ್ ಪ್ರೀಮಿಯಂ ಮತ್ತು ವಿಂಕ್ ಮ್ಯೂಸಿಕ್‌ನ ಉಚಿತ ಚಂದಾದಾರಿಕೆಯನ್ನು ನೀಡ್ತಿದೆ.
ರಿಲಯನ್ಸ್ ಜಿಯೋದ 249 ರೂಪಾಯಿ ಪ್ಲಾನ್ ಸಿಂಧುತ್ವ 28 ದಿನಗಳು. ಪ್ರತಿದಿನ 2 ಜಿಬಿ ಡೇಟಾ ಬಳಕೆದಾರರಿಗೆ ಲಭ್ಯವಿದೆ. ಈ ಯೋಜನೆಯಲ್ಲಿ ಜಿಯೋ ನೆಟ್‌ವರ್ಕ್‌ಗಳಿಗೆ ಅನಿಯಮಿತ ಉಚಿತ ಕರೆ ಲಭ್ಯವಿದೆ. ಪ್ರತಿ ದಿನ 100 ಉಚಿತ ಎಸ್‌ಎಂಎಸ್‌ನೊಂದಿಗೆ ಬರುವ ಈ ಯೋಜನೆಯಲ್ಲಿ ಜಿಯೋ ಅಪ್ಲಿಕೇಶನ್‌ಗಳ ಉಚಿತ ಚಂದಾದಾರಿಕೆ ಲಭ್ಯವಿದೆ.