ನವದೆಹಲಿ: ಉಜ್ವಲ ಯೋಜನೆಯಡಿ ಮೂರು ಗೃಹಬಳಕೆ ಅನಿಲ ಸಿಲಿಂಡರ್ ಗಳನ್ನು ಉಚಿತವಾಗಿ ನೀಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
14.2 ಕೆಜಿ ಗೃಹಬಳಕೆ ಅಡುಗೆ ಅನಿಲ ಸಿಲಿಂಡರ್ ದರ 800 ರೂ.ಗಿಂತಲೂ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಏಪ್ರಿಲ್ ನಿಂದ ಮೂರು ತಿಂಗಳ ಕಾಲ ಉಜ್ವಲ ಯೋಜನೆ ಫಲಾನುಭವಿಗಳಿಗೆ ತಿಂಗಳಿಗೆ ಒಂದರಂತೆ ಮೂರು ಸಿಲಿಂಡರ್ಗಳನ್ನು ಉಚಿತವಾಗಿ ನೀಡಲಾಗುವುದು. ಈ ಕುರಿತಾದ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಪರಿಶೀಲನೆ ನಡೆಸಿದೆ.
ಜನವರಿಯಲ್ಲಿ 694 ರೂಪಾಯಿ ಇದ್ದ ಸಿಲಿಂಡರ್ ಈಗ 819 ರೂಪಾಯಿಗೆ ತಲುಪಿದೆ. ಕಳೆದ ಮೇ ತಿಂಗಳಿನಿಂದ ಇದುವರೆಗೆ ಸಿಲಿಂಡರ್ ಬೆಲೆ 237.50 ರೂ. ಹೆಚ್ಚಳವಾಗಿದ್ದು, ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಪ್ಯಾಕೇಜ್ನಲ್ಲಿ ಕಳೆದ ವರ್ಷ ಮೂರು ತಿಂಗಳು ಉಜ್ವಲ ಯೋಜನೆ ಫಲಾನುಭವಿಗಳಿಗೆ ಉಚಿತವಾಗಿ ನೀಡಲಾಗಿತ್ತು. ಅದೇ ರೀತಿ ಈ ಸಲವೂ ಉಚಿತವಾಗಿ 3 ಸಿಲಿಂಡರ್ ನೀಡಲಾಗುವುದು ಎಂದು ಹೇಳಲಾಗಿದೆ.