ಫೋನ್ ಪೇ ಗ್ರಾಹಕರು ನೀವಾಗಿದ್ದರೆ, ನಿಮಗೊಂದು ಖುಷಿ ಸುದ್ದಿ ಇದೆ. ಫೋನ್ ಪೇ ಗ್ರಾಹಕರು ಕೇವಲ 149 ರೂಪಾಯಿಗೆ ವಿಮೆ ಸೌಲಭ್ಯ ಪಡೆಯಬಹುದಾಗಿದೆ. ಡಿಜಿಟಲ್ ಪಾವತಿ ಪ್ಲಾಟ್ಫಾರ್ಮ್ ಫೋನ್ ಪೇ ತನ್ನ ಬಳಕೆದಾರರಿಗೆ ICICI Prudential Life Insurance ಸಹಯೋಗದೊಂದಿಗೆ ಈ ವಿಶೇಷ ಸೌಲಭ್ಯವನ್ನು ಒದಗಿಸುತ್ತಿದೆ.
ಈ ವಿಮೆಗೆ ಆದಾಯದ ಮಿತಿಯಿದೆ. ವಾರ್ಷಿಕ ಆದಾಯವು 1 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನದಾಗಿರಬೇಕು. ವಯಸ್ಸು 18 ವರ್ಷದಿಂದ 50 ವರ್ಷಗಳಾಗಿರಬೇಕು. ಕಾಗದ ಪತ್ರ, ವೈದ್ಯಕೀಯ ತಪಾಸಣೆ ಇಲ್ಲದೆ ವಿಮೆ ಪಡೆಯಲು ಬಯಸುವವರು 1 ಲಕ್ಷದಿಂದ 20 ಲಕ್ಷದವರೆಗೆ ವಿಮೆ ಪಾಲಿಸಿ ಪಡೆಯಬಹುದು. ಅವಧಿ ಮುಗಿದ ನಂತ್ರ ಫೋನ್ ಪೇ ಅಪ್ಲಿಕೇಷನ್ ಮೂಲಕ ನವೀಕರಿಸಬಹುದು.
ಆನ್ಲೈನ್ ಮೂಲಕ ಆರಾಮವಾಗಿ ವಿಮೆಯನ್ನು ಆಯ್ಕೆ ಮಾಡಿಕೊಳ್ಳಬಹುದು. ಆಂಡ್ರಾಯ್ಡ್ ಅಥವಾ ಐಒಎಸ್ ನಲ್ಲಿ ಮೈ ಮನಿ ವಿಭಾಗವನ್ನು ಕ್ಲಿಕ್ ಮಾಡಬೇಕು. ಅಲ್ಲಿ ವಿಮೆ ವಿಭಾಗವನ್ನು ಕ್ಲಿಕ್ ಮಾಡಬೇಕು. ಬೇರೆ ಪೇಜ್ ತೆರೆದುಕೊಳ್ಳುತ್ತದೆ. ಅದ್ರಲ್ಲಿ ವಿಮೆ ಮೊತ್ತವನ್ನು ಪಾವತಿಸಬೇಕು. ಅರ್ಜಿದಾರರ ಹಾಗೂ ನಾಮಿನಿಯ ವಿವರವನ್ನು ನಮೂದಿಸಬೇಕು. ಆನ್ಲೈನ್ ನಲ್ಲಿಯೇ ಹಣ ಪಾವತಿ ಮಾಡುವ ಮೂಲಕ ನೀವು ವಿಮೆ ಖರೀದಿ ಮಾಡಬಹುದು. ಫೋನ್ ಪೇಯನ್ನು 25 ಕೋಟಿಗೂ ಹೆಚ್ಚು ಮಂದಿ ಬಳಸುತ್ತಿದ್ದಾರೆ.