ಕೊರೊನಾ ಕಾರಣದಿಂದ ಆರ್ಥಿಕ ಪರಿಸ್ಥಿತಿ ಹದಗೆಟ್ಟು ಹೋಗಿದೆ, ಕಂಪನಿಗಳು, ಕಾರ್ಖಾನೆಗಳು ಮುಚ್ಚುತ್ತಿವೆ. ಈ ನಡುವೆಯೂ ಒಂದಷ್ಟು ಪಾಸಿಟಿವ್ ಸುದ್ದಿ ಬರಲಾರಂಭಿಸಿವೆ.
ಡೆಲಾಯ್ಟ್ ಇಂಡಿಯಾ ಕಾರ್ಯಪಡೆ ನಡೆಸಿದ ಸರ್ವೇ ಪ್ರಕಾರ ಶೇಕಡ 23ರಷ್ಟು ಭಾರತೀಯ ಕಂಪನಿಗಳು ಮುಂದಿನ ಆರ್ಥಿಕ ವರ್ಷದಲ್ಲಿ ಉದ್ಯೋಗಿಗಳ ವೇತನ ಹೆಚ್ಚಿಸಲು ಯೋಜಿಸಿವೆಯಂತೆ. ಹಾಗೆಯೇ ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ.38 ರಷ್ಟು ಕಂಪನಿಗಳು ವೇತನ ಹೆಚ್ಚಿಸಿದ್ದು, ಅವು 2021ರಲ್ಲೂ ವೇತನ ಹೆಚ್ಚಿಸಲು ನಿರ್ಧರಿಸಿವೆ.
ಹಿಂದಿನ ವರ್ಷಗಳ ಕಾರ್ಯಕ್ಷಮತೆ ಆಧಾರದ ಮೇಲೆ ಈ ಸಾಲಿನ ವೇತನ ಹೆಚ್ಚಳ ಪ್ರಕಟಿಸಲಾಗಿದೆ. ಆದರೆ ಮುಂದೆ ಭವಿಷ್ಯದ ಕಾರ್ಯಕ್ಷಮತೆ ಆಧಾರದ ಮೇಲೆ ವೇತನ ಹೆಚ್ಚಳದ ನಿರ್ಧಾರವಾಗುತ್ತದೆ ಎಂದು ಬಹುಪಾಲು ಕಂಪೆನಿಗಳು ಹೇಳಿಕೊಂಡಿವೆ.
ಗ್ರಾಹಕ ಉತ್ಪನ್ನಗಳು, ಉತ್ಪಾದನೆ ಮತ್ತು ಸೇವೆಗಳ ಕೈಗಾರಿಕೆಗಳು ಮುಂದಿನ ಹಣಕಾಸು ವರ್ಷದಲ್ಲಿ ಯಾವುದೇ ಇಂಕ್ರಿಮೆಂಟ್ ನೀಡದಿರಲು ಯೋಚಿಸಿವೆ.