![](https://kannadadunia.com/wp-content/uploads/2021/01/2021_Triumph_Speed_Triple_1200_RS.jpg)
ಕಂಪನಿಯು ಈ ಅದ್ಭುತ ಬೈಕ್ಗೆ ಭಾರತದಲ್ಲಿ 16.95 ಲಕ್ಷ ರೂಪಾಯಿ ಮೌಲ್ಯದಿಂದ ಈ ಬೈಕ್ ಶ್ರೇಣಿ ಆರಂಭವಾಗಲಿದೆ.
ಕಂಪನಿಯ ಪ್ರಕಾರ ನ್ಯೂ ಸ್ಪೀಡ್ ಟ್ರಿಪಲ್ 1200 ಆರ್ಎಸ್ ಸ್ಪೀಡ್ ಟ್ರಿಪಲ್ ಇಲ್ಲಿಯವರೆಗಿನ ಅತ್ಯಂತ ಪವರ್ಫುಲ್ ಬೈಕ್ ಆಗಿದೆ.
ಈ ಬೈಕ್ನ ಖರೀದಿ ಮಾಡ ಬಯಸುವವರು ಕಂಪನಿಯ ಯಾವುದೇ ಅಧಿಕೃತ ಡೀಲರ್ಶಿಪ್ನಲ್ಲಿ ಬುಕ್ ಮಾಡಬಹುದಾಗಿದೆ.
ಉದ್ಯೋಗಾಕಾಂಕ್ಷಿಗಳೇ ಗಮನಿಸಿ: ವಿವಿಧ ಹುದ್ದೆಗಳಿಗೆ BEL ನಿಂದ ಅರ್ಜಿ ಆಹ್ವಾನ
ನ್ಯೂ 2021 ಟ್ರಯಂಪ್ ಸ್ಪೀಡ್ ಟ್ರಿಪಲ್ 1200 ಆರ್ಎಸ್ ಮೋಟಾರ್ ಸೈಕಲ್ನಲ್ಲಿ ಆಲ್ ನ್ಯೂ 1600ಸಿಸಿ, 3 ಸಿಲೆಂಡರ್ ತರಹದ ಲಿಕ್ವಿಡ್ ಕೂಲ್ಡ್, 12 ವಾಲ್ವ್ ಡಿಹೆಚ್ಓಸಿ ಇನ್ಲೈನ್ ಇಂಜಿನ್ ಇರಲಿದೆ. ಈ ಇಂಜಿನ್ ಹಳೆಯ ಮಾಡಲ್ಗೆ ಹೋಲಿಸಿದ್ರೆ 7 ಕೆಜಿ ಹಗುರವಾಗಿದೆ. ಬೈಕ್ ನಿರ್ಮಾಣಕಾರರ ಪ್ರಕಾರ ಈ ಇಂಜಿನ್ನನ್ನು ತಮ್ಮ ಮೋಟೋ 2 ರೇಸ್ ಇಂಜಿನ್ ಪ್ರೋಗ್ರಾಂನಿಂದ ಪ್ರೇರಣೆ ಪಡೆದು ಮಾಡಲಾಗಿದೆ ಎಂದಿದ್ದಾರೆ. ಈ ಬೈಕ್ನಲ್ಲಿ 6 ಸ್ಪೀಡ್ ಗಿಯರ್ಬಾಕ್ಸ್ನ ಜೊತೆ ಬೈ ಡೈರೆಕ್ಷನಲ್ ಕಿಕ್ಶಿಫ್ಟರ್ ಸ್ಟ್ಯಾಂಡರ್ಡ್ ನೀಡಲಾಗಿದೆ. ಕಂಪನಿಯು ಇಲ್ಲಿಯವರೆಗಿನ ಎಲ್ಲಾ ಸ್ಪೋರ್ಟ್ಸ್ ಬೈಕ್ಗಳಿಗಿಂತ ಈ ಬೈಕ್ ಹೆಚ್ಚು ಶಕ್ತಿಶಾಲಿ ಎಂದು ಹೇಳಿದೆ.