ಮುಂಬೈ: 2000 ರೂಪಾಯಿ ಮುಖಬೆಲೆಯ ನೋಟುಗಳ ಚಲಾವಣೆ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿದೆ. ಇದೇ ವೇಳೆ 500 ರೂಪಾಯಿ ನೋಟುಗಳ ಬಳಕೆ ಭಾರಿ ಏರಿಕೆ ಕಂಡಿದೆ.
ಆರ್.ಬಿ.ಐ. ನೀಡಿರುವ ಮಾಹಿತಿಯಂತೆ 2020ರಲ್ಲಿ ಶೇಕಡ 2.4 ರಷ್ಟಿದ್ದ 2000 ರೂಪಾಯಿ ನೋಟುಗಳ ಚಲಾವಣೆ ಕುಸಿತಕಂಡಿದ್ದು, 2021 ರಲ್ಲಿ ಶೇ. 2 ರಷ್ಟು, 2022ರ ಮಾರ್ಚ್ ಅಂತ್ಯದ ವೇಳೆಗೆ ಶೇಕಡ 1.6 ಕ್ಕೆ ಇಳಿಕೆಯಾಗಿದೆ.
ಮಾರ್ಚ್ ಅಂತ್ಯದವರೆಗೆ ಚಲಾವಣೆಯಲ್ಲಿ ಒಟ್ಟು 13,053 ಕೋಟಿ ಕರೆನ್ಸಿ ನೋಟುಗಳಿದ್ದು, ಕಳೆದ ವರ್ಷ 12,437 ಕೋಟಿಯಷ್ಟು ನೋಟುಗಳು ಚಲಾವಣೆಯಲ್ಲಿದ್ದವು. 2000 ರೂ. ಮುಖಬೆಲೆಯ ನೋಟುಗಳ ಸಂಖ್ಯೆ 214 ಕೋಟಿಗೆ ಇಳಿಕೆಯಾಗಿದೆ.