ಬಿಎಸ್ಎನ್ಎಲ್ ಗ್ರಾಹಕರಿಗೆ ಖುಷಿ ಸುದ್ದಿ ನೀಡಿದೆ. ಹೊಸ ಪ್ರಸ್ತಾಪದಡಿ ಎಲ್ಲಾ ಪ್ರಿಪೇಯ್ಡ್ ಯೋಜನೆಗಳಲ್ಲಿ ಶೇಕಡಾ 25 ರಷ್ಟು ಹೆಚ್ಚುವರಿ ಡೇಟಾವನ್ನು ನೀಡುವುದಾಗಿ ಕಂಪನಿ ಘೋಷಿಸಿದೆ. ಕಂಪನಿಯ ಪ್ರಕಟಣೆಯ ಪ್ರಕಾರ, ಹಳೆ ಹಾಗೂ ಹೊಸ ಯೋಜನೆ ಸೇರಿದಂತೆ ಎಲ್ಲ ಯೋಜನೆಯಲ್ಲಿ ಹೆಚ್ಚುವರಿ ಡೇಟಾವನ್ನು ನೀಡಲಾಗುವುದು. ಅಕ್ಟೋಬರ್ 31 ರವರೆಗೆ ಗ್ರಾಹಕರು ಈ ಕೊಡುಗೆಯ ಲಾಭ ಪಡೆಯಬಹುದು.
ಬಿಎಸ್ಎನ್ಎಲ್ Customer Delight Month ಅಡಿಯಲ್ಲಿ ಈ ಆಫರ್ ನೀಡ್ತಿದೆ. 20 ವರ್ಷಗಳನ್ನು ಪೂರೈಸಿದ ಖುಷಿಯಲ್ಲಿರುವ ಬಿಎಸ್ಎನ್ಎಲ್ ಶೇಕಡಾ 25 ರಷ್ಟು ಡೇಟಾ ಆಫರ್ ಬಿಡುಗಡೆ ಮಾಡಿದೆ. ತಮಿಳುನಾಡು, ರಾಜಸ್ಥಾನ, ಪಂಜಾಬ್ ಮತ್ತು ತೆಲಂಗಾಣ ಟ್ವಿಟರ್ ಖಾತೆಯಲ್ಲಿ ಬಿಎಸ್ಎನ್ಎಲ್ ಈ ಘೋಷಣೆ ಮಾಡಿದೆ.
ಎಲ್ಲಾ ವಲಯಗಳಲ್ಲಿ ಶೇಕಡಾ 25ರಷ್ಟು ಹೆಚ್ಚುವರಿ ಡೇಟಾ ಸಿಗಲಿದೆ ಎಂದು ಕಂಪನಿ ಹೇಳಿದೆ. ಈ ಯೋಜನೆಯಡಿ ಮೂಲ ಡೇಟಾದ ಜೊತೆಗೆ ಶೇಕಡಾ 25 ರಷ್ಟು ಡೇಟಾ ಗ್ರಾಹಕರಿಗೆ ಸಿಗಲಿದೆ. ಅಕ್ಟೋಬರ್ 31ರವರೆಗೆ ಗ್ರಾಹಕರಿಗೆ ಇದ್ರ ಲಾಭ ಸಿಗಲಿದೆ.