ಕೇಂದ್ರ ಸರ್ಕಾರದ ಖಾಸಗೀಕರಣ ನೀತಿ ವಿರೋಧಿಸಿ ರಾಷ್ಟ್ರೀಯ ಬ್ಯಾಂಕ್ ಒಕ್ಕೂಟ ಇದೇ ತಿಂಗಳ 15 ಹಾಗೂ 16ರಂದು ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಿದೆ. ಹೀಗಾಗಿ ಈ ಎರಡು ದಿನಗಳ ಕಾಲ ಬ್ಯಾಂಕ್ ಸೇವೆಯಲ್ಲಿ ವ್ಯತ್ಯಯವಾಗಲಿದೆ ಎಂದು ಎಸ್ಬಿಐ ಹೇಳಿದೆ.
ಮಾರ್ಚ್ 10ರಂದು ಎಕ್ಸ್ಚೇಂಜ್ ಫೈಲಿಂಗ್ನಲ್ಲಿ ಎಸ್ಬಿ, ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ ಹಾಗೂ ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ ಮಾರ್ಚ್ 15 ಹಾಗೂ 16ರಂದು ಬ್ಯಾಂಕ್ ಮುಷ್ಕರ ನಡೆಸುವಂತೆ ನಮಗೆ ಸೂಚನೆ ನೀಡಿದೆ ಎಂದು ಹೇಳಿದೆ.
ಮ್ಯೂಚುವಲ್ ಫಂಡ್ ಹೂಡಿಕೆದಾರರಿಗೆ ಮಹತ್ವದ ಸುದ್ದಿ: ಏ.1 ರಿಂದ ಜಾರಿಗೆ ಬರಲಿದೆ ಈ ನಿಯಮ
ಈ ಮುಷ್ಕರದಿಂದಾಗಿ ಬ್ಯಾಂಕ್ ಸೇವೆಗಳಲ್ಲಿ ಗ್ರಾಹಕರಿಗೆ ವ್ಯತ್ಯಯ ಉಂಟಾಗಲಿದೆ ಎಂದು ದೇಶದ ಪ್ರತಿಷ್ಠಿತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಿಗೆ ಸೂಚನೆ ನೀಡಿದೆ.