ಕೇಂದ್ರ ಸರ್ಕಾರದ ಖಾಸಗೀಕರಣ ನೀತಿ ವಿರೋಧಿಸಿ ಬ್ಯಾಂಕ್ ಒಕ್ಕೂಟಗಳು ಎರಡು ದಿನದ ಮುಷ್ಕರಕ್ಕೆ ಕರೆ ನೀಡಿದ್ದು ಇದರಿಂದಾಗಿ ಸಾರ್ವಜನಿಕ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಕೆನರಾ ಬ್ಯಾಂಕ್ ಹೇಳಿದೆ. ರಾಷ್ಟ್ರೀಯ ಬ್ಯಾಂಕ್ ಒಕ್ಕೂಟ ಮಾರ್ಚ್ 15-16ರಂದು ಮುಷ್ಕರಕ್ಕೆ ಕರೆ ನೀಡಿವೆ.
ಭಾರತೀಯ ಬ್ಯಾಂಕ್ ಒಕ್ಕೂಟ ಮಾರ್ಚ್ 15 ಹಾಗೂ 16ರಂದು ಮುಷ್ಕರಕ್ಕೆ ಕರೆ ನೀಡಿದೆ. ಈ ಸಂದರ್ಭದಲ್ಲಿ ಗ್ರಾಹಕರಿಗೆ ಬ್ಯಾಂಕ್ ಸೇವೆಗಳು ಲಭ್ಯ ಇರೋದಿಲ್ಲ ಎಂದು ಕೆನರಾ ಬ್ಯಾಂಕ್ ರೆಗ್ಯೂಲೇಟರಿ ಫೈಲಿಂಗ್ನಲ್ಲಿ ಮಾಹಿತಿ ನೀಡಿದೆ.
ಮುಷ್ಕರದ ದಿನಗಳಲ್ಲಿ ಬ್ಯಾಂಕ್ ಶಾಖೆಗಳಲ್ಲಿ ಕಾರ್ಯನಿರ್ವಹಣೆಯಲ್ಲಿ ಅಗತ್ಯ ಕ್ರಮ ತೆಗೆದುಕೊಳ್ತಿದೆ ಎಂದು ಕೆನರಾ ಬ್ಯಾಂಕ್ ತಿಳಿಸಿದೆ. ಆದರೆ ಮುಷ್ಕರ ಕಾರ್ಯರೂಪಕ್ಕೆ ಬಂದಲ್ಲಿ ಅದು ಶಾಖೆಗಳು ಹಾಗೂ ಕಾರ್ಯನಿರ್ವಹಣೆ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಿದೆ.