alex Certify ಮಹಿಳೆಯರಿಗೆ ಗುಡ್ ನ್ಯೂಸ್: ‘ಮಹಿಳಾ ಸಮ್ಮಾನ್ ಯೋಜನೆ’ಯಡಿ ಶೇ. 7.5 ಬಡ್ಡಿ: 6 ತಿಂಗಳಲ್ಲಿ 18 ಲಕ್ಷ ಖಾತೆ ಓಪನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳೆಯರಿಗೆ ಗುಡ್ ನ್ಯೂಸ್: ‘ಮಹಿಳಾ ಸಮ್ಮಾನ್ ಯೋಜನೆ’ಯಡಿ ಶೇ. 7.5 ಬಡ್ಡಿ: 6 ತಿಂಗಳಲ್ಲಿ 18 ಲಕ್ಷ ಖಾತೆ ಓಪನ್

ನವದೆಹಲಿ: ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರದ ಅಡಿಯಲ್ಲಿ 18 ಲಕ್ಷ ಖಾತೆಗಳನ್ನು ಪ್ರಾರಂಭವಾದ ಆರು ತಿಂಗಳೊಳಗೆ ತೆರೆಯಲಾಗಿದೆ.

ದೇಶದಾದ್ಯಂತ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ 2023 ರ ಅಡಿಯಲ್ಲಿ 11 ಸಾವಿರ ಕೋಟಿ ರೂಪಾಯಿಗಳಿಗೂ ಹೆಚ್ಚು 18 ಲಕ್ಷ ಖಾತೆಗಳನ್ನು ತೆರೆಯಲಾಗಿದೆ.

ಈ ವರ್ಷ ಏಪ್ರಿಲ್ 1 ರಂದು ಹೊಸ ಯೋಜನೆ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರವನ್ನು ಪ್ರಾರಂಭಿಸಲಾಗಿದೆ ಎಂದು ಸಂವಹನ ಸಚಿವಾಲಯ ತಿಳಿಸಿದೆ. ಎರಡು ವರ್ಷಗಳ ಅವಧಿಯ ಯೋಜನೆಯು ತ್ರೈಮಾಸಿಕ ಸಂಯೋಜಿತ ಶೇ. 7.5 ರಷ್ಟು ಆಕರ್ಷಕ ಮತ್ತು ಸ್ಥಿರ ಬಡ್ಡಿಯನ್ನು ನೀಡುತ್ತದೆ. ಈ ಯೋಜನೆಯು 2025 ರ ಮಾರ್ಚ್ 31 ರವರೆಗೆ ಎರಡು ವರ್ಷಗಳ ಅವಧಿಗೆ ಮಾನ್ಯವಾಗಿರುತ್ತದೆ. ದೆಹಲಿಯಲ್ಲಿ 405 ಕೋಟಿ ರೂಪಾಯಿಗಳಿಗೆ 33 ಸಾವಿರಕ್ಕೂ ಹೆಚ್ಚು ಖಾತೆಗಳನ್ನು ತೆರೆಯಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...