ಕೇಂದ್ರ ಸರ್ಕಾರ ಇಂದು 3.0 ಪರಿಹಾರ ಫ್ಯಾಕೇಜ್ ಘೋಷಿಸಿದೆ. ಈ ಪ್ಯಾಕೇಜ್‌ನಲ್ಲಿ ಸರ್ಕಾರ ಉದ್ಯೋಗ, ರೈತರು ಮತ್ತು ಇನ್ಫ್ರಾ ಬಗ್ಗೆ ಗಮನ ಹರಿಸಿದೆ. ದೇಶದ 14 ಕೋಟಿ ರೈತರಿಗೆ ಸರ್ಕಾರ ದೊಡ್ಡ ಉಡುಗೊರೆ ನೀಡಿದೆ.
ರಸಗೊಬ್ಬರ ಸಬ್ಸಿಡಿಯನ್ನು ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. ಕೇಂದ್ರ ಸರ್ಕಾರ 65,000 ಕೋಟಿ ರೂಪಾಯಿಯನ್ನು ರಸಗೊಬ್ಬರ ಸಬ್ಸಿಡಿಗೆ ಮೀಸಲಿಟ್ಟಿರುವುದಾಗಿ ತಿಳಿಸಿದೆ. ಸರ್ಕಾರದ ಈ ನಿರ್ಧಾರ ರೈತರಿಗೆ ನೆರವಾಗಲಿದೆ. ರೈತರಿಗೆ ಕೈಗೆಟುಕುವ ಬೆಲೆಯಲ್ಲಿ ರಸಗೊಬ್ಬರ ಸಿಗಲಿದೆ. ಇದರಿಂದ 14 ಕೋಟಿ ರೈತರಿಗೆ ಅನುಕೂಲವಾಗಲಿದೆ.
ಇದಲ್ಲದೆ ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ ಅಡಿಯಲ್ಲಿ ರಾಜ್ಯದ 116 ಜಿಲ್ಲೆಗಳ ವಲಸೆ ಕಾರ್ಮಿಕರಿಗೆ ಅವರ ಜಿಲ್ಲೆಯಲ್ಲೇ ಉದ್ಯೋಗ ನೀಡುವುದಾಗಿ ಈ ಹಿಂದೆ ಘೋಷಿಸಿತ್ತು. ಇದಕ್ಕಾಗಿ ಸರ್ಕಾರ 37,543 ಕೋಟಿ ರೂಪಾಯಿ ಮೀಸಲಿಟ್ಟಿತ್ತು.ಈ ಯೋಜನೆ 2020 ರ ಅಕ್ಟೋಬರ್ 31 ರವರೆಗೆ ಇತ್ತು. ಈಗ ಅದಕ್ಕೆ ಸರ್ಕಾರ 10,000 ಕೋಟಿ ರೂಪಾಯಿಗಳನ್ನು ನೀಡುವುದಾಗಿ ಘೋಷಿಸಿದೆ.