ಕೊರೊನಾ ಸಂಕಷ್ಟದಲ್ಲಿ ಅನೇಕರು ಕೆಲಸ ಕಳೆದುಕೊಂಡಿದ್ದಾರೆ. ಸ್ವಂತ ಉದ್ಯೋಗ ಶುರು ಮಾಡುವ ಆಲೋಚನೆ ನಡೆಸುತ್ತಿದ್ದಾರೆ. ಚೀನಾ ವಸ್ತುಗಳು ಭಾರತೀಯ ಮಾರುಕಟ್ಟೆಯಿಂದ ಕಣ್ಮರೆಯಾಗ್ತಿದೆ. ಈ ಸಂದರ್ಭದಲ್ಲಿ ದೇಸಿ ವಸ್ತುಗಳಿಗೆ ಬೇಡಿಕೆ ಹೆಚ್ಚಾಗ್ತಿದೆ. ನೀವು ಕೂಡ ಇದ್ರ ಲಾಭ ಪಡೆಯಬಹುದು.
ಅಗರಬತ್ತಿ ಉತ್ಪಾದನೆಯಲ್ಲಿ ಭಾರತವನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ ಪ್ರಸ್ತಾಪಿಸಿದ್ದ ಉದ್ಯೋಗ ಸೃಷ್ಟಿ ಕಾರ್ಯಕ್ರಮಕ್ಕೆ ಸರ್ಕಾರ ಅನುಮೋದನೆ ನೀಡಿದೆ. ಖಾದಿ ಅಗರಬತ್ತಿ ಆತ್ಮನಿರ್ಭರ್ ಮಿಷನ್ ಹೆಸರಿನ ಈ ಕಾರ್ಯಕ್ರಮವು ದೇಶದ ವಿವಿಧ ಭಾಗಗಳಲ್ಲಿ ನಿರುದ್ಯೋಗಿ ಮತ್ತು ವಲಸೆ ಕಾರ್ಮಿಕರಿಗೆ ಉದ್ಯೋಗ ಸೃಷ್ಟಿಸುವ ಉದ್ದೇಶವನ್ನು ಹೊಂದಿದೆ.
ಅಗರಬತ್ತಿ ತಯಾರಿಸಲು ಅನೇಕ ರೀತಿಯ ಯಂತ್ರಗಳನ್ನು ಬಳಸಲಾಗುತ್ತದೆ. ಅಗರಬತ್ತಿ ತಯಾರಿಸಲು 35 ಸಾವಿರದಿಂದ 1.75 ಲಕ್ಷ ರೂಪಾಯಿಗಳವರೆಗೆ ಇರುತ್ತದೆ. ಸ್ವಯಂಚಾಲಿತ ಯಂತ್ರ ಬಳಸಿದ್ರೆ ದಿನಕ್ಕೆ 100 ಕೆಜಿ ಅಗರಬತ್ತಿ ತಯಾರಾಗುತ್ತದೆ. ಇದು ದುಬಾರಿ ಎನ್ನುವವರು ಮನೆಯಲ್ಲೇ 13 ಸಾವಿರ ರೂಪಾಯಿಯಲ್ಲೂ ಶುರು ಮಾಡಬಹುದು. ಯಂತ್ರ ಬಳಸುವವರಿಗೆ ಆರಂಭದಲ್ಲಿ ಸುಮಾರು 5 ಲಕ್ಷ ರೂಪಾಯಿ ವೆಚ್ಛ ಬರುತ್ತದೆ. ಒಳ್ಳೆ ಉತ್ಪನ್ನ ಹಾಗೂ ಆಕರ್ಷಕ ಪ್ಯಾಕಿಂಗ್ ಮೂಲಕ ನೀವು ಮಾರುಕಟ್ಟೆ ನಿರ್ಮಿಸಿಕೊಂಡು ಹೆಚ್ಚೆಚ್ಚು ಲಾಭ ಪಡೆಯಬಹುದಾಗಿದೆ.