ಸ್ವಾವಲಂಭಿ ಭಾರತ ನಿರ್ಮಾಣ ಯೋಜನೆಯಡಿ ಕೇಂದ್ರ ಸರ್ಕಾರ ಸಾಕಷ್ಟ ಕೆಲಸಗಳನ್ನು ಮಾಡ್ತಿದೆ. ಈಗಾಗಲೇ ಚೀನಾದ ಅನೇಕ ವಸ್ತುಗಳನ್ನು ಬ್ಯಾನ್ ಮಾಡಲಾಗಿದ್ದು, ಅಲ್ಲಿಂದ ಆಮದಾಗ್ತಿದ್ದ ವಸ್ತುಗಳನ್ನು ಭಾರತದಲ್ಲಿಯೇ ತಯಾರಿಸುವ ಪ್ರಯತ್ನ ನಡೆಯುತ್ತಿದೆ. ದೀಪಾವಳಿಗೆ ಕಾಮಧೇನು ದೀಪಾವಳಿ ಅಭಿಯಾನ ಶುರುವಾಗಿದೆ.
ಈ ಅಭಿಯಾನವನ್ನು ರಾಷ್ಟ್ರೀಯ ಕಾಮಧೇನು ಆಯೋಗ ಪ್ರಾರಂಭಿಸಿದೆ. ಈ ಅಭಿಯಾನದಡಿಯಲ್ಲಿ ದೀಪಾವಳಿಗೆ ಸಂಬಂಧಿಸಿದ 12 ವಸ್ತುಗಳನ್ನು ವಿಶೇಷವಾಗಿ ಗೋವಿನ ಸಗಣಿಯಿಂದ ತಯಾರಿಸಲಾಗಿದೆ. ಮಹಿಳಾ ಸಂಘಟನೆಗಳಿಗೆ ಮೊದಲು ತರಬೇತಿ ನೀಡಲಾಗಿದೆ. ನಂತ್ರ ಅವ್ರನ್ನು ಗೋಶಾಲೆಯೊಂದಿಗೆ ಸಂಪರ್ಕಿಸಲಾಗಿದೆ. ಪರಸ್ಪರ ಸಾರ್ವಜನಿಕ ಸಂಪರ್ಕ ಮತ್ತು ಸ್ಥಳೀಯ ಮಾರುಕಟ್ಟೆಯ ಸಹಾಯದಿಂದ ವಸ್ತುಗಳ ಮಾರಾಟಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಕಾಮಧೇನು ದೀಪಾವಳಿ ಅಭಿಯಾನಕ್ಕಿಂತ ಮೊದಲು ಪಿಎಂ ಮೋದಿ ಸೂಚನೆ ಮೇರೆಗೆ ಗೋಮಯ್ ಗಣೇಶ ಅಭಿಯಾನ ನಡೆದಿತ್ತು. ಇದು ಯಶಸ್ವಿಯಾದ್ಮೇಲೆ ದೀಪಾವಳಿ ಅಭಿಯಾನ ಶುರುವಾಗಿದೆ. ಈ ಅಭಿಯಾನದಡಿ ಸಗಣಿಯಿಂದ ದೀಪ, ಮೇಣದ ಬತ್ತಿ, ಧೂಪದ್ರವ್ಯ, ಸ್ವಸ್ತಿಕ, ಹೋಮವ ಸಾಮಗ್ರಿ, ಲಕ್ಷ್ಮಿ, ಗಣೇಶನ ವಿಗ್ರಹ ಸೇರಿದಂತೆ 12 ವಸ್ತುಗಳನ್ನು ತಯಾರಿಸಲಾಗ್ತಿದೆ. ಪ್ರತಿ ಮನೆಗೆ ವಸ್ತುಗಳನ್ನು ತಲುಪಿಸುವುದು ಹಾಗೂ ಗೋವಿನ ಮಹತ್ವ ತಿಳಿಸುವುದು ಇದ್ರ ಉದ್ದೇಶ. ಹಾಗೆ ಚೀನಾ ವಸ್ತುಗಳ ಬಳಕೆ ಕಡಿಮೆ ಮಾಡಿ, ದೇಶದ ಜನರಿಗೆ ಉದ್ಯೋಗ ನೀಡುವುದು ಇದ್ರ ಗುರಿ ಎಂದು ಸಂಘಟನೆ ಮುಖ್ಯಸ್ಥರು ಹೇಳಿದ್ದಾರೆ. ಸದ್ಯ ಅಭಿಯಾನ ಸಣ್ಣ ಪ್ರಮಾಣದಲ್ಲಿ ಶುರುವಾಗಿದೆ.