ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಬಗ್ಗೆ ಜನರಲ್ಲಿ ಇನ್ನೂ ವಿಶ್ವಾಸವಿದೆ. ಹೆಚ್ಚು ಬಡ್ಡಿ ಸಿಗುವ ಯೋಜನೆಗಳಲ್ಲಿ ಪಿಪಿಎಫ್ ಕೂಡ ಒಂದಾಗಿದೆ. ತೆರಿಗೆ ಉಳಿಸಲು ಇದು ಉತ್ತಮ ಆಯ್ಕೆ. ಪಿಪಿಎಫ್‌ನಲ್ಲಿ ತಿಂಗಳಿಗೆ 1000 ರೂಪಾಯಿ ಹೂಡಿಕೆ ಮಾಡಿ, ಲಕ್ಷ ರೂಪಾಯಿ ಗಳಿಸಬಹುದು.
ಪಿಪಿಎಫ್ ಖಾತೆ 15 ವರ್ಷಗಳಲ್ಲಿ ಪಕ್ವವಾಗುತ್ತದೆ. 15 ವರ್ಷಗಳ ನಂತರ ಖಾತೆದಾರನು ಎಲ್ಲಾ ಹಣವನ್ನು ಹಿಂಪಡೆಯಬಹುದು. ಖಾತೆ ಮುಂದುವರಿಸಲು ಬಯಸಿದ್ರೆ ಖಾತೆಯನ್ನು 5-5 ವರ್ಷಗಳವರೆಗೆ ವಿಸ್ತರಿಸಬಹುದು. ಈ ಐದು ವರ್ಷ ಪ್ರತಿ ತಿಂಗಳು ನೀವು ಹೂಡಿಕೆ ಮಾಡಬಹುದು. ಇಲ್ಲವೆಂದ್ರೆ ಹೂಡಿಕೆಯಿಲ್ಲದೆ ಖಾತೆ ಮುಂದುವರಿಸಬಹುದು. ಆದ್ರೆ ಹಾಗೆ ಮಾಡಿದಾಗ ಠೇವಣಿಗೆ ಬಡ್ಡಿ ಪಾವತಿ ಮಾಡಬೇಕಾಗುತ್ತದೆ. ಪ್ರಸ್ತುತ, ಪಿಪಿಎಫ್‌ಗೆ ಶೇಕಡಾ 7.1 ರಷ್ಟು ಬಡ್ಡಿ ನೀಡಲಾಗುತ್ತಿದೆ.
ಬಹಳ ಚಿಕ್ಕ ವಯಸ್ಸಿನಲ್ಲಿಯೇ ಪಿಪಿಎಫ್‌ನಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸುವುದು ಒಳ್ಳೆಯದು. 20 ನೇ ವಯಸ್ಸಿನಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿದ್ರೆ 60 ವರ್ಷ ತುಂಬುವವರೆಗೆ ಈ ಖಾತೆ ಮುಂದುವರಿಸಬಹುದು. ಮೊದಲ 15 ವರ್ಷಗಳಲ್ಲಿ ತಿಂಗಳಿಗೆ 1000 ರೂಪಾಯಿಗಳ ಹೂಡಿಕೆ ಮಾಡಬೇಕು. 15 ವರ್ಷಗಳವರೆಗೆ ಪ್ರತಿ ತಿಂಗಳು 1000 ರೂಪಾಯಿಗಳನ್ನು ಠೇವಣಿ ಮಾಡಿದ್ರೆ ಒಟ್ಟು 1.80 ಲಕ್ಷ ರೂಪಾಯಿ ಉಳಿಸುತ್ತೀರಿ. 15 ವರ್ಷಗಳ ನಂತರ ನಿಮಗೆ 3.25 ಲಕ್ಷ ರೂಪಾಯಿ ಸಿಗಲಿದೆ. ಅಂದ್ರೆ ಶೇಕಡಾ 7.1 ಬಡ್ಡಿಯಂತೆ ನಿಮಗೆ 1.45 ಲಕ್ಷ ರೂಪಾಯಿ ಬಡ್ಡಿ ಹಣ ಸಿಗುತ್ತದೆ.
15 ವರ್ಷಗಳ ನಂತರವೂ ಪ್ರತಿ ತಿಂಗಳು 1000 ರೂಪಾಯಿ ಹೂಡಿಕೆ ಮುಂದುವರಿಸಿದ್ರೆ 5 ವರ್ಷಗಳ ನಂತ್ರ 3.25 ಲಕ್ಷ ರೂಪಾಯಿ ಮೊತ್ತವು 5.32 ಲಕ್ಷ ರೂಪಾಯಿಯಾಗುತ್ತದೆ. ಹೀಗೆ ಐದು ಬಾರಿ ಐದು ವರ್ಷಗಳ ಕಾಲ ಮುಂದುವರೆಯುತ್ತ ಹೋದಲ್ಲಿ 20 ನೇ ವಯಸ್ಸಿನಲ್ಲಿ ಪ್ರಾರಂಭಿಸಿದ 1000 ರೂಪಾಯಿಗಳ ಹೂಡಿಕೆ ನಿವೃತ್ತಿಯವರೆಗೂ 26.32 ಲಕ್ಷ ರೂಪಾಯಿಯಾಗುತ್ತದೆ.