ಉದ್ಯೋಗಿಗಳಿಗೆ ಭರ್ಜರಿ ಸಿಹಿ ಸುದ್ದಿ ಸಿಕ್ಕಿದೆ. ವಾರದಲ್ಲಿ ನಾಲ್ಕು ದಿನ ಕೆಲಸ, ಮೂರು ದಿನ ರಜೆ ನೀಡಲು 100 ಕಂಪನಿಗಳು ಒಪ್ಪಿಕೊಂಡಿವೆ.
ಪ್ರಸ್ತುತ ಬಹುತೇಕ ಕಂಪನಿಗಳಲ್ಲಿ ವೀಕೆಂಡ್ ರಜೆ ಶನಿವಾರ ಮತ್ತು ಭಾನುವಾರ ಇರುತ್ತದೆ. ಇನ್ನು ಮುಂದೆ ವಾರದಲ್ಲಿ ಮೂರು ದಿನ ವೀಕೆಂಡ್ ರಜೆ ಸಿಗಲಿದೆ. ವಾರದಲ್ಲಿ ನಾಲ್ಕು ದಿನ ಕೆಲಸ, ಮೂರು ದಿನ ರಜೆ ನೀಡಲು 100 ಬ್ರಿಟನ್ ಕಂಪನಿಗಳು ಒಪ್ಪಿಗೆ ನೀಡಿವೆ. ಬ್ರಿಟನ್ ನಲ್ಲಿ 100 ಕಂಪನಿಗಳು ನಾಲ್ಕು ದಿನ ಕೆಲಸ ಮತ್ತು ಮೂರು ದಿನದ ವಾರಾಂತ್ಯ ರಜೆಗೆ ಒಪ್ಪಿಕೊಂಡಿರುವುದರಿಂದ ಉದ್ಯೋಗಿಗಳಿಂದ ಭಾರಿ ಮೆಚ್ಚುಗೆ, ಸಂತಸ ವ್ಯಕ್ತವಾಗಿದೆ.
ಬ್ರಿಟನ್ ನಲ್ಲಿ 100 ಕಂಪನಿಗಳು ವೇತನ ನಷ್ಟವಿಲ್ಲದೆ ಎಲ್ಲಾ ಉದ್ಯೋಗಿಗಳಿಗೆ ನಾಲ್ಕು ದಿನ ಕೆಲಸ, ಮೂರು ದಿನ ರಜೆ ನೀಡಲು ಒಪ್ಪಿದ್ದು ಈ 100 ಕಂಪನಿಗಳಲ್ಲಿನ ಉದ್ಯೋಗಿಗಳಿಗೆ ಅನುಕೂಲವಾಗುತ್ತದೆ.
ಆಟಂ ಬ್ಯಾಂಕ್, ಆವಿನ್ ಜಾಗತಿಕ ಮಾರ್ಕೆಟಿಂಗ್ ಕಂಪನಿ ಹೊಸ ಕೆಲಸದ ನೀತಿಗೆ ಸಹಮತ ವ್ಯಕ್ತಪಡಿಸಿವೆ. ವಾರದಲ್ಲಿ ಮೂರು ದಿನ ರಜೆ ನೀಡುವುದರಿಂದ ಉತ್ಪಾದಕತೆ ಮೇಲೆ ಉತ್ತಮ ಪರಿಣಾಮ ಬೀರಲಿದೆ ಎಂದು ಕಂಪನಿಗಳು ಹೇಳಿವೆ.
ಭಾರತದಲ್ಲಿ ಟೆಕ್ ಕಂಪನಿಗಳು ವೀಕೆಂಡ್ ಗೆ ಎರಡು ದಿನ ರಜೆ ನೀಡುತ್ತಿವೆ. ಉಳಿದಂತೆ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ವಾರಕ್ಕೆ ಒಂದು ದಿನ ರಜೆ ನೀಡಲಾಗುತ್ತಿದೆ. ಭಾರತದಲ್ಲಿ ಕಾರ್ಮಿಕರ ಕಾನೂನಿಗೆ ತಿದ್ದುಪಡಿ ತಂದು ವಾರದಲ್ಲಿ ನಾಲ್ಕು ದಿನ ಕೆಲಸ, ಮೂರು ದಿನ ರಜೆ ನೀಡುವ ನಿಯಮಗಳನ್ನು ಜಾರಿಗೆ ತರುವ ಬಗ್ಗೆ ಪ್ರಸ್ತಾಪವಿದೆ.