ಕೊರೊನಾ ಸಂದರ್ಭದಲ್ಲಿ ಜೀವ ವಿಮೆ ಮಹತ್ವ ಪಡೆದಿದೆ. ಕೊರೊನಾ ಜನರಲ್ಲಿ ಅನೇಕ ಬದಲಾವಣೆ ತಂದಿದೆ. ತುರ್ತು ಸಂದರ್ಭದಲ್ಲಿ ನೆರವಾಗುವ ಜೀವ ವಿಮೆಗೆ ಜನರು ಹೆಚ್ಚಿನ ಒಲವು ತೋರಿಸುತ್ತಿದ್ದಾರೆ. ಜೀವ ವಿಮೆ ಖರೀದಿ ವೇಳೆ ಜನರು ಕೆಲವೊಂದು ತಪ್ಪುಗಳನ್ನು ಮಾಡುತ್ತಾರೆ. ಜೀವ ವಿಮೆ ಖರೀದಿಗೆ ಮುನ್ನ ಜನರು ಕೆಲವೊಂದು ಸಂಗತಿಯನ್ನು ತಿಳಿದಿರಬೇಕಾಗುತ್ತದೆ.
ವಿಮೆ ಖರೀದಿ ಮೊದಲು ವಿಮೆ ಕವರ್ ಹಾಗೂ ಬಜೆಟ್ ನಿರ್ಧರಿಸಿಕೊಳ್ಳಬೇಕು. ಮೊದಲು ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕು. ವೈಯಕ್ತಿಕ ಹಣಕಾಸು ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಉಚಿತ ಕ್ಯಾಲ್ಕುಲೇಟರ್‌ನ ಸಹಾಯವನ್ನು ನೀವು ತೆಗೆದುಕೊಳ್ಳಬಹುದು. ವಿಮೆಯನ್ನು ಅಪಾಯದ ಪರಿಹಾರದ ದೃಷ್ಟಿಕೋನದಿಂದ ನೋಡಬೇಕು. ಹೂಡಿಕೆ ಅಥವಾ ಲಾಭದ ದೃಷ್ಟಿಕೋನದಿಂದ ಅಲ್ಲ. ವಾರ್ಷಿಕ ಆದಾಯಕ್ಕಿಂತ ಕನಿಷ್ಠ 10 ಪಟ್ಟು ಜೀವ ವಿಮಾ ರಕ್ಷಣೆಯಾಗಿ ತೆಗೆದುಕೊಳ್ಳಬೇಕು.
ಎರಡನೇಯದಾಗಿ ಯಾವ ಕಂಪನಿ ಜೀವ ವಿಮೆ ಖರೀದಿ ಮಾಡಬೇಕೆಂಬುದನ್ನು ನಿರ್ಧರಿಸಬೇಕು. ಟರ್ಮ್ ಪ್ಲಾನ್ ಖರೀದಿಸುತ್ತಿದ್ದರೆ, ಕ್ಲೈಮ್ ಅನುಪಾತವು ಸುಮಾರು ಶೇಕಡಾ 95 ರಷ್ಟಿರುವ ಕಂಪನಿಗಳಿಗೆ ಆದ್ಯತೆ ನೀಡಿ. ಉತ್ತಮ ಕ್ಲೈಮ್ ಅನುಪಾತವನ್ನು ಹೊಂದಿರುವ ಕಂಪನಿಯ ಟರ್ಮ್ ಪ್ಲಾನ್ ಪ್ರೀಮಿಯಂ ಪಾವತಿಸಲು ದುಬಾರಿಯಾಗಿದೆ. ಖಾಸಗಿ ವಿಮಾ ಕಂಪನಿಗಳು ಸಹ ಆನ್‌ಲೈನ್‌ನಲ್ಲಿ ಪಾಲಿಸಿಗಳನ್ನು ಮಾರಾಟ ಮಾಡುತ್ತವೆ. ಅವು ತುಲನಾತ್ಮಕವಾಗಿ ಅಗ್ಗವಾಗಿವೆ. ನಿಮ್ಮ ಬಜೆಟ್ ಮತ್ತು ವಿಮಾ ರಕ್ಷಣೆಯ ಮೊತ್ತದ ಆಧಾರದ ಮೇಲೆ ಯಾವ ಕಂಪನಿಯಿಂದ ಪಾಲಿಸಿಯನ್ನು ಖರೀದಿಸುತ್ತೀರಿ ಎಂದು ನಿರ್ಧರಿಸಿ.
ನಿಮ್ಮ ಬಜೆಟನ್ನು ಎರಡು ವಿಮಾ ಕಂಪನಿಗಳಿಗೆ ವಿಂಗಡಿಸಿ. ಹೆಚ್ಚಿನ ಬಜೆಟ್ ಹೊಂದಿದ್ದರೆ ಇದನ್ನು ಎರಡು ಕಂಪನಿಗಳಿಗೆ ವಿಂಗಡಿಸುವುದು ಒಳ್ಳೆಯದು. 60 ಲಕ್ಷ ವಿಮೆ ಪ್ಲಾನ್ ಹೊಂದಿದ್ದರೆ 30 ಲಕ್ಷ ರೂಪಾಯಿ ಕವರ್ ಹೊಂದಿರುವ ಪಾಲಿಸಿ ಖರೀದಿ ಮಾಡಿ. ಒಂದು ವೇಳೆ ಪಾಲಿಸಿದಾರ ಸಾವನ್ನಪ್ಪಿದರೆ ಕುಟುಂಬಸ್ಥರು ವಿಮೆ ಪರಿಹಾರ ಪಡೆಯುತ್ತಾರೆ. ಒಂದು ವೇಳೆ ಒಂದು ವಿಮೆ ಕಂಪನಿ ಇದನ್ನು ತಿರಸ್ಕರಿಸಿದ್ರೆ ಇನ್ನೊಂದು ಕಂಪನಿ ನೀಡಬಹುದು. ಇಲ್ಲವೆ ಅಗತ್ಯವೆನಿಸಿದಾಗ ಒಂದು ಕಂಪನಿ ಪಾಲಿಸಿಯನ್ನು ವಿತ್ ಡ್ರಾ ಮಾಡಿ,ಇನ್ನೊಂದನ್ನು ಮುಂದುವರಿಸಬಹುದು.
ಜೀವ ವಿಮೆ ಅವಧಿ ಕೂಡ ಮಹತ್ವ ಪಡೆಯುತ್ತದೆ. ನಿವೃತ್ತಿ ನಂತ್ರ ಹಣದ ಸಮಸ್ಯೆ ಎದುರಾಗುತ್ತದೆ. ಹಾಗಾಗಿ ಆ ಸಂದರ್ಭದಲ್ಲಿ ಹಣ ನಿಮ್ಮ ಕೈ ಸೇರುವಂತಹ ಪಾಲಿಸಿ ಖರೀದಿ ಮಾಡಿ.
ಜೀವ ವಿಮೆ ಖರೀದಿ ವೇಳೆ ನೀವು ಸರಿಯಾದ ಮಾಹಿತಿಯನ್ನು ನೀಡಬೇಕು. ಫಾರ್ಮ್ ಭರ್ತಿ ಮಾಡುವ ವೇಳೆ ಸರಿಯಾದ ಮಾಹಿತಿ ನೀಡಬೇಕು. ನಿಮಗೆ ಖಾಯಿಲೆಯಿದ್ದರೆ ಅದರ ಮಾಹಿತಿಯನ್ನು ನೀಡಬೇಕು. ಪಾಲಿಸಿ ಖರೀದಿ ವೇಳೆ ಎಲ್ಲ ಮಾಹಿತಿ ನೀಡಿಲ್ಲವೆಂದ್ರೆ ಕೊನೆಯಲ್ಲಿ ತೊಂದರೆಯಾಗುತ್ತದೆ.
ಯಾವ ಜೀವ ವಿಮೆ ಖರೀದಿ ಮಾಡಬೇಕು ಎಂಬುದು ಕೂಡ ಮಹತ್ವ ಪಡೆಯುತ್ತದೆ. ವಿಮಾ ಪಾಲಿಸಿಯ ಪ್ರೀಮಿಯಂಗಳು ಮತ್ತು ವೈಶಿಷ್ಟ್ಯಗಳನ್ನು ಹೋಲಿಸಿ ನೋಡಬೇಕು. ಎಲ್ಲ ಕಂಪನಿಗಳು ಪಾಲಿಸಿಯ ಬಗ್ಗೆ ಮಾಹಿತಿ ನೀಡಿರುತ್ತವೆ. ಅವುಗಳನ್ನು ಹೋಲಿಸಿ ನೋಡಿ. ಯಾವುದು ಉತ್ತಮ ಎಂಬುದನ್ನು ಕೊನೆಯಲ್ಲಿ ನಿರ್ಧರಿಸಿ.
ವಿಮೆ ಪಾಲಿಸಿ ಪ್ರೀಮಿಯಂನಲ್ಲಿ ಬೇರೆ ಬೇರೆ ವಿಧಾನವಿದೆ. ಏಕ ಪ್ರೀಮಿಯಂ ಹಾಗೂ ನಿಯಮಿತ ಪ್ರೀಮಿಯಂ. ಸಾಮಾನ್ಯವಾಗಿ ಆದಾಯ ತೆರಿಗೆ ಉಳಿಸಿದಲು ನಿಯಮಿತಿ ಪ್ರೀಮಿಯಂ ಆಯ್ಕೆ ಮಾಡಲು ತಜ್ಞರು ಸಲಹೆ ನೀಡುತ್ತಾರೆ.
ವಿಮೆ ಮತ್ತು ಹೂಡಿಕೆಯ ನಡುವಿನ ವ್ಯತ್ಯಾಸವನ್ನು ತಿಳಿದುಕೊಳ್ಳಬೇಕು. ಜೀವ ವಿಮಾ ಪಾಲಿಸಿಯನ್ನು ಖರೀದಿಸುವ ಉದ್ದೇಶ ಅಪಾಯದಿಂದ ರಕ್ಷಣೆ. ಸಂಪತ್ತನ್ನು ಹೆಚ್ಚಿಸಲು ಹೂಡಿಕೆ ಮಾಡಲಾಗುತ್ತದೆ. ಜೀವ ವಿಮೆ ಮತ್ತು ಹೂಡಿಕೆ ಎರಡನ್ನೂ ಪ್ರತ್ಯೇಕವಾಗಿ ಇಡಬೇಕು.
ವಿಮಾ ಪಾಲಿಸಿಯನ್ನು ಎರಡು ರೀತಿಯಲ್ಲಿ ಖರೀದಿ ಮಾಡಬಹುದು. ಎಲ್ಲವನ್ನೂ ಪರೀಕ್ಷಿಸಿದ ನಂತರ ಉತ್ತಮ ವಿಮಾ ಕಂಪನಿಯಿಂದ ಆನ್‌ಲೈನ್‌ನಲ್ಲಿ ಟರ್ಮ್ ಪ್ಲಾನ್ ಖರೀದಿಸಬಹುದು. ಜೀವ ವಿಮಾ ಪಾಲಿಸಿಯನ್ನು ಆನ್‌ಲೈನ್‌ನಲ್ಲಿ ಖರೀದಿಸುವುದು ಅನುಕೂಲಕರ ಮತ್ತು ಅಗ್ಗವಾಗಿದೆ.