ಗರಿಷ್ಠ ಮಾರಾಟ ಬೆಲೆಗಿಂತಲೂ ಅಧಿಕ ಬೆಲೆಯಲ್ಲಿ ವಸ್ತುಗಳನ್ನು ಮಾರಾಟ ಮಾಡಿದಲ್ಲಿ, ಅಂತಹ ವರ್ತಕರಿಗೆ 5,000 – 15,000 ರೂ.ಗಳವರೆಗೆ ದಂಡ ಹಾಗೂ ಇದೇ ತಪ್ಪನ್ನು ಮತ್ತೆ ಮತ್ತೆ ಮಾಡಿದಲ್ಲಿ ಒಂದು ಲಕ್ಷ ರೂ.ಗಳವರೆಗೆ ದಂಡ ವಿಧಿಸುವ ಪ್ರಸ್ತಾಪವನ್ನು ಗ್ರಾಹಕ ವ್ಯವಹಾರಗಳ ಸಚಿವಾಲಯ ಮುಂದಿಟ್ಟಿದೆ.
ಪ್ಯಾಕೇಜ್ ಆಗಿರುವ ಐಟಮ್‌ಗಳಾದ ಕುಡಿಯುವ ನೀರು ಹಾಗೂ ಆಹಾರೋತ್ಪನ್ನಗಳ ಹಾಗೂ ಇತರ ಎಲ್ಲಾ ಗ್ರಾಹಕ ಬಳಕೆ ವಸ್ತುಗಳ ಮೇಲೆ ಅನ್ವಯವಾಗುವಂತೆ ಮೇಲ್ಕಂಡ ಕಾನೂನನ್ನು ತರಲು ಉದ್ದೇಶಿಸಲಾಗಿದೆ. ಸದ್ಯ, ಪ್ಯಾಕೇಜ್ ಆಗಿರುವ ವಸ್ತುಗಳನ್ನು MRPಗಿಂತ ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡಿದಲ್ಲಿ ಗರಿಷ್ಠ 5,000 ರೂ.ಗಳಷ್ಟು ದಂಡ ವಿಧಿಸುವ ಅವಕಾಶವಿದೆ.
ಈ ರೀತಿಯ ಅಭ್ಯಾಸಗಳ ಹಿಂದೆ ಕ್ರಿಮಿನಲ್ ಉದ್ದೇಶಗಳ ಸಾಧ್ಯತೆ ಇಲ್ಲದೇ ಇರುವ ಕಾರಣ, ಜೈಲು ಶಿಕ್ಷೆ ಬದಲಿಗೆ ದೊಡ್ಡ ಮೊತ್ತವನ್ನು ದಂಡವನ್ನಾಗಿ ವಿಧಿಸಲು ಪ್ರಸ್ತಾಪ ಮಾಡಲಾಗಿದೆ.