ರಾಷ್ಟ್ರೀಯ ಕೆರಿಯರ್ ಸರ್ವೀಸ್‌ನಲ್ಲಿ (NCS) ಉದ್ಯೋಗ ಕೋರಿಕೊಂಡು ಅರ್ಜಿ ಸಲ್ಲಿಸಿರುವವರ ಸಂಖ್ಯೆಯು 1.03 ಕೋಟಿ ತಲುಪಿದೆ ಎಂದು ಕೇಂದ್ರ ಕಾರ್ಮಿಕ ಸಚಿವ ಸಂತೋಷ್ ಕುಮಾರ್ ಗಂಗ್ವಾರ್ ರಾಜ್ಯ ಸಭೆಗೆ ತಿಳಿಸಿದ್ದಾರೆ.
ಇದಕ್ಕೆ ಪ್ರತಿಯಾಗಿ, ಸೆಪ್ಟೆಂಬರ್ 16, 2020ರ ವೇಳೆಗೆ 78.09 ಲಕ್ಷ ಉದ್ಯೋಗಾವಕಾಶಗಳನ್ನು ತೆರೆಯಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಈ ಪೋರ್ಟಲ್ ಮೂಲಕ ಉದ್ಯೋಗ ಹೊಂದಿಕೆ, ಕೆರಿಯರ್ ಕೌನ್ಸಿಲಿಂಗ್, ಕೌಶಲ್ಯ ತರಬೇತಿ, ಅಪ್ರೆಂಟಿಸ್‌ಶಿಪ್ ಸೇರಿದಂತೆ ಇನ್ನಿತರ ಮಹತ್ವದ ಮಾಹಿತಿಗಳನ್ನು ಒದಗಿಸಲಾಗುತ್ತಿದೆ. ಬಳಕೆದಾರರಿಗೆ ನೆರವಾಗಲೆಂದೇ ಈ NCS ಪೋರ್ಟಲ್‌ಗೆ ಸಹಾಯವಾಣಿಯೊಂದನ್ನು ತೆರೆಯಲಾಗಿದ್ದು, ಈ ಸೇವೆಗಳು ನಿಶ್ಶುಲ್ಕವಾಗಿ ಲಭ್ಯವಾಗಲಿವೆ ಎಂದು ಸಚಿವರು ಹೇಳಿದ್ದಾರೆ.