ಇಷ್ಟು ದಿನ ನಿಮಗೆ ಇಷ್ಟವಾದ ಚಾನಲ್ ಬೇಕು ಅಂದರೆ ಅದಕ್ಕೆ ಆಪರೇಟರ್ ಸಹಾಯ ಬೇಕೇ ಬೇಕಿತ್ತು. ಅವರ ಸಹಾಯದಿಂದಲೇ ಬೇಕಾದ ಚಾನಲ್ ಹಾಕಿಸಿಕೊಳ್ಳಬೇಕಿತ್ತು. ಅಥವಾ ಯಾವುದಾದರು ಚಾನಲ್ ಬೇಡ ಎಂದರೆ ಅವರಿಗೇ ಹೇಳಬೇಕಿತ್ತು. ಆದರೆ ಇನ್ಮುಂದೆ ಹಾಗಲ್ಲ. ನಿಮಗಿಷ್ಟವಾದ ಚಾನಲ್ ಬೇಕು ಅಂದರೆ ಅದನ್ನ ನೀವೇ ಸೆಲೆಕ್ಟ್ ಮಾಡಬಹುದು. ಬೇಡ ಎಂದರೆ ತೆಗೆದು ಹಾಕಬಹುದು. ಹೇಗೆ ಅಂತೀರಾ ಮುಂದೆ ನೋಡಿ.
ಹೌದು, ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ ಗ್ರಾಹಕರ ಅನುಕೂಲಕ್ಕಾಗಿ ಆಪ್ ಒಂದನ್ನ ಬಿಡುಗಡೆ ಮಾಡಿದೆ. ಈ ಅಪ್ಲಿಕೇಶನ್‌ನ ಹೆಸರು ಟಿವಿ ಚಾನೆಲ್ ಸೆಲೆಕ್ಟರ್ ಎಂದು. ಇದರ ಸಹಾಯದಿಂದ, ನೀವು ಈಗ ನಿಮ್ಮ ನೆಚ್ಚಿನ ಚಾನಲ್ ಗಳಿಗೆ ಚಂದಾದಾರರಾಗಬಹುದು. ಈ ಅಪ್ಲಿಕೇಶನ್ ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಸ್ಟೋರ್‌ನಲ್ಲಿಯೂ ಸಿಗುತ್ತದೆ.
ಈ ಅಪ್ಲಿಕೇಷನ್ ಬಳಸುವುದು ಹೇಗೆ ಎಂದರೆ, ಮೊದಲು ಅಪ್ಲಿಕೇಷನ್ ಡೌನ್ ಲೋಡ್ ಮಾಡಿ. ನಂತರ ನಿಮ್ಮ ನೋಂದಾಯಿತ ಸಂಖ್ಯೆ ನೀಡಿದರೆ ಅದಕ್ಕೊಂದು ಒಟಿಪಿ ಬರುತ್ತದೆ. ಒಟಿಪಿ ಹಾಕಿದರೆ ನೋಂದಾಯಿತರಾದಂತೆ. ಅಥವಾ ನೀವು ತಮ್ಮ ಸಂಖ್ಯೆಯನ್ನು ಸೇವಾ ಪೂರೈಕೆದಾರರೊಂದಿಗೆ ನೋಂದಾಯಿಸದಿದ್ದರೆ ಈ ಒಟಿಪಿ ಅವರ ಟಿವಿ ಪರದೆಯಲ್ಲಿ ಕಾಣಿಸುತ್ತದೆ.