ಹಿರಿಯ ನಾಗರಿಕರಿಗೆ ವಿಶೇಷ ನಿಶ್ಚಿತ ಠೇವಣಿ ಯೋಜನೆಯನ್ನು 2020ರ ಮೇ ನಲ್ಲಿ ಹಲವು ಬ್ಯಾಂಕುಗಳು ಘೋಷಣೆ ಮಾಡಿದ್ದವು. 60 ವರ್ಷ ಮೇಲ್ಪಟ್ಟ ನಾಗರಿಕರಿಗೆ ಅನುಕೂಲವಾಗಲೆಂಬ ಕಾರಣಕ್ಕೆ ಈ ಯೋಜನೆಯನ್ನು ಪ್ರಕಟಿಸಲಾಗಿತ್ತು.
ಇದೀಗ ಬ್ಯಾಂಕುಗಳು ಮತ್ತೊಮ್ಮೆ ಹಿರಿಯ ನಾಗರಿಕರಿಗೆ ಸಿಹಿಸುದ್ದಿಯನ್ನು ನೀಡಿದ್ದು, ವಿಶೇಷ ಬ್ಯಾಂಕ್ ನಿಶ್ಚಿತ ಠೇವಣಿ ಯೋಜನೆಯ ಅವಧಿಯನ್ನು ಜೂನ್ 30ರ ವರೆಗೆ ವಿಸ್ತರಿಸಲಾಗಿದೆ.
ಗಮನಿಸಿ..! CBSE 10 ನೇ ತರಗತಿ ಪರೀಕ್ಷೆ ರದ್ದಾದ್ರೂ ಎಕ್ಸಾಮ್ ಬರೆಯಲು ಅವಕಾಶ -ಇಲ್ಲಿದೆ ಮಾಹಿತಿ
ಈ ಯೋಜನೆಯ ಅಡಿಯಲ್ಲಿ ಐದು ವರ್ಷಗಳ ಅವಧಿಗೆ ನಿಶ್ಚಿತ ಠೇವಣಿಗೆ ಶೇಕಡ 5.5 ರ ಬಡ್ಡಿ ದೊರಕುತ್ತಿದ್ದು, ಬ್ಯಾಂಕ್ ಆಫ್ ಬರೋಡಾ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಐಸಿಐಸಿಐ ಬ್ಯಾಂಕ್, ಎಚ್.ಡಿ.ಎಫ್.ಸಿ. ಬ್ಯಾಂಕ್ ಈ ಯೋಜನೆಯ ಸೌಲಭ್ಯ ನೀಡುತ್ತಿವೆ.