
ಹಬ್ಬದ ಋತುವಿನಲ್ಲಿ ಎಸ್.ಬಿ.ಐ. ಗ್ರಾಹಕರಿಗೆ ಆಕರ್ಷಕ ಉಡುಗೊರೆ ನೀಡ್ತಿದೆ. ಎಸ್.ಬಿ.ಐ. ವಾಹನ, ಗೃಹ, ಚಿನ್ನ, ವೈಯಕ್ತಿಕ ಸಾಲದ ಮೇಲೆ ಆಕರ್ಷಕ ಕೊಡುಗೆಗಳನ್ನು ಘೋಷಿಸಿದೆ.
ವಾಹನ ಸಾಲ ವಿಭಾಗದಲ್ಲಿ ಕಾರಿನ ಸಾಲಕ್ಕೆ ಅರ್ಜಿ ಸಲ್ಲಿಸುವ ಗ್ರಾಹಕರಿಗೆ ಬ್ಯಾಂಕ್ ಶೇಕಡಾ 100 ರಷ್ಟು ಹಣಕಾಸು ಸೌಲಭ್ಯ ನೀಡಲಿದೆ ಎಂದು ಎಸ್.ಬಿ.ಐ. ಪ್ರಕಟಿಸಿದೆ. ಎಸ್.ಬಿ.ಐ. ಉತ್ಸವ 2020 ಕೊಡುಗೆಯನ್ನು ಎಸ್.ಬಿ.ಐ. ಯೋನೊ ಅಪ್ಲಿಕೇಶನ್ ಹೊಂದಿರುವವರಿಗೆ ಮಾತ್ರ ಲಭ್ಯವಿದೆ.
ಅನುಮೋದಿತ ಯೋಜನೆಗಳಲ್ಲಿ ಮನೆ ಖರೀದಿದಾರರಿಗೆ ಗೃಹ ಸಾಲಗಳ ಸಂಸ್ಕರಣಾ ಶುಲ್ಕವನ್ನು ಶೇಕಡಾ 100 ರಷ್ಟು ಮನ್ನಾ ಮಾಡಲಾಗುವುದು ಎಂದು ಎಸ್.ಬಿ.ಐ. ಘೋಷಿಸಿದೆ. ಗ್ರಾಹಕರಿಗೆ ಬಡ್ಡಿದರದ ಮೇಲೆ 10 ಬಿಪಿಎಸ್ ವರೆಗೆ ವಿಶೇಷ ರಿಯಾಯಿತಿಗಳನ್ನು ನೀಡಲಾಗುವುದು. ಸಾಲದ ಅರ್ಜಿಗಳಿಗೆ ಗ್ರಾಹಕರ ಕ್ರೆಡಿಟ್ ಸ್ಕೋರ್ ಮತ್ತು ಸಾಲದ ಮೊತ್ತದ ಆಧಾರದ ಮೇಲೆ ವಿಶೇಷ ರಿಯಾಯಿತಿಗಳನ್ನು ನೀಡಲಾಗುವುದು. ಯೋನೊ ಅಪ್ಲಿಕೇಷನ್ ಮೂಲಕ ಗೃಹ ಸಾಲಕ್ಕೆ ಅರ್ಜಿ ಸಲ್ಲಿಸಿದರೆ 5 ಬಿಪಿಎಸ್ ಬಡ್ಡಿ ರಿಯಾಯತಿಯನ್ನು ಬ್ಯಾಂಕ್ ನೀಡಲಿದೆ.