
ಖಾಸಗಿ ವಲಯದ ಎಚ್.ಡಿ.ಎಫ್.ಸಿ. ಬ್ಯಾಂಕ್ ಹಬ್ಬದ ಋತುವಿನಲ್ಲಿ ಗ್ರಾಹಕರಿಗೆ ಫೆಸ್ಟಿವ್ ಟ್ರೀಟ್ಸ್ ಶುರು ಮಾಡಿದೆ. ಈ ಯೋಜನೆಯಡಿಯಲ್ಲಿ, ಗ್ರಾಹಕರಿಗೆ ಸಾಲ ಸೇರಿದಂತೆ ಅನೇಕ ಸೇವೆಗಳಲ್ಲಿ ವಿಶೇಷ ರಿಯಾಯಿತಿ ಸಿಗ್ತಿದೆ. ಫೆಸ್ಟಿವಲ್ ಟ್ರೀಟ್ಸ್ 2.0 ಗ್ರಾಹಕರಿಗೆ ಕ್ರೆಡಿಟ್ ಕಾರ್ಡ್‌ಗಳು, ಸಾಲಗಳು, ವೈಯಕ್ತಿಕ ಸಾಲಗಳು, ವಾಹನ ಸಾಲಗಳು ಮತ್ತು ಗೃಹ ಸಾಲಗಳು ಇತ್ಯಾದಿಗಳಲ್ಲಿ ಅನೇಕ ಕೊಡುಗೆಗಳನ್ನು ನೀಡಲಾಗ್ತಿದೆ.
ಎಚ್.ಡಿ.ಎಫ್.ಸಿ. ಬ್ಯಾಂಕಿನ ಫೆಸ್ಟಿವಲ್ ಟ್ರೀಟ್ಸ್ 2.0 ರಲ್ಲಿ ಗ್ರಾಹಕರಿಗೆ 1000 ಕ್ಕೂ ಹೆಚ್ಚು ಕೊಡುಗೆಗಳನ್ನು ನೀಡ್ತಿದೆ. ಮೊಬೈಲ್, ಬಾಳಿಕೆ ಬರುವ ವಸ್ತು, ಎಲೆಕ್ಟ್ರಾನಿಕ್ಸ್, ಉಡುಪುಗಳು, ಆಭರಣಗಳ ವಿಭಾಗದಲ್ಲಿ ಹಬ್ಬದ ಋತುವಿನಲ್ಲಿ ಉತ್ತಮ ಫಲಿತಾಂಶ ಸಿಗುವ ನಿರೀಕ್ಷೆಯನ್ನು ಬ್ಯಾಂಕ್ ಹೊಂದಿದೆ. ಇಎಂಐ ರಿಯಾಯಿತಿಗಳು, ಕ್ಯಾಶ್‌ಬ್ಯಾಕ್, ಗಿಫ್ಟ್ ಕಾರ್ಡ್ ಮತ್ತು ಇತರ ಅನೇಕ ಪ್ರಯೋಜನಗಳನ್ನು ಬ್ಯಾಂಕ್ ನೀಡ್ತಿದೆ.
ಆನ್‌ಲೈನ್ ಖರೀದಿಯಲ್ಲಿ ರಿಯಾಯಿತಿಗಳು, ಕ್ಯಾಶ್‌ಬ್ಯಾಕ್ ಮತ್ತು ಹೆಚ್ಚುವರಿ ರಿವಾರ್ಡ್ ಪಾಯಿಂಟ್‌ಗಳನ್ನು ನೀಡಲು ಬ್ಯಾಂಕ್ ಚಿಲ್ಲರೆ ಬ್ರಾಂಡ್‌ಗಳೊಂದಿಗೆ ಕೈ ಜೋಡಿಸಿದೆ. ಪ್ರಮುಖ ಆನ್‌ಲೈನ್ ಕಂಪನಿಗಳಾದ ಅಮೆಜಾನ್, ಮಿಂತ್ರ, ಪೆಪ್ಪರ್‌ಫ್ರೈ, ಸ್ವಿಗ್ಗಿ ಮತ್ತು ಗ್ರಾಫರ್ಸ್ ಈ ಬಾರಿ ವಿಶೇಷ ಡೀಲ್‌ಗಳನ್ನು ನೀಡಲಿವೆ.