ಪ್ರಧಾನ ಮಂತ್ರಿ ನರೇಂದ್ರ ಮೋದಿ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಜಾರ್ಖಂಡ್‌ನಲ್ಲಿ ನಿಂಬೆ ಹುಲ್ಲು ಬೆಳೆಯುತ್ತಿರುವ ಬಗ್ಗೆ ಹೇಳಿದ್ದರು. ನಿಂಬೆ ಹುಲ್ಲು ಬೆಳೆಸುವ ಮೂಲಕ ಇಲ್ಲಿನ ಜನರು ಹೇಗೆ ಸ್ವಾವಲಂಬಿಗಳಾಗುತ್ತಿದ್ದಾರೆ ಎಂದು ಪ್ರಧಾನಿ ಹೇಳಿದ್ದರು. ನಿಂಬೆ ಹುಲ್ಲು ಔಷಧೀಯ ಸಸ್ಯವಾಗಿದೆ. ಇದನ್ನು ಕಾಸ್ಮೆಟಿಕ್ ಮತ್ತು ಡಿಟರ್ಜೆಂಟ್ ನಲ್ಲಿ ಬಳಸಲಾಗುತ್ತದೆ. ನಿಂಬೆ ಹುಲ್ಲು ಬೆಳೆಸುವ ಮೂಲಕ ನೀವು ಉತ್ತಮ ಹಣವನ್ನು ಗಳಿಸಬಹುದು.
ಈ ನಿಂಬೆ ಹುಲ್ಲು ನಾಲ್ಕು ತಿಂಗಳಲ್ಲಿ ತಯಾರಾಗುತ್ತದೆ. ಈ ನಿಂಬೆ ಹುಲ್ಲಿನಿಂದ ತೈಲವನ್ನು ತಯಾರಿಸಲಾಗುತ್ತದೆ. ಇದಕ್ಕೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಹಾಗೂ ಬೆಲೆಯಿದೆ. ನಿಂಬೆ ಹುಲ್ಲು ಕೃಷಿಗೆ ಗೊಬ್ಬರದ ಅವಶ್ಯಕತೆಯಿಲ್ಲ. ಕಾಡು ಪ್ರಾಣಿಗಳಿಂದ ಬೆಳೆ ನಾಶವಾಗುವ ಭಯವಿಲ್ಲ. ಈ ಬೆಳೆ ಕೂಡ ಲಾಭದಾಯಕ ವ್ಯವಹಾರವಾಗಿದೆ. ಬೆಳೆ ಬಿತ್ತಿದ ನಂತರ ಐದರಿಂದ ಆರು ವರ್ಷಗಳವರೆಗೆ ಲಾಭ ಪಡೆಯಬಹುದು.
ನಿಂಬೆ ಹುಲ್ಲು ಬೆಳೆಯಲು ಫೆಬ್ರವರಿಯಿಂದ ಜುಲೈ ಉತ್ತಮ ಸಮಯ. ವರ್ಷದಲ್ಲಿ ಮೂರರಿಂದ ನಾಲ್ಕು ಬಾರಿ ಕೊಯ್ಲು ಮಾಡಬಹುದು. ನಿಂಬೆ ಹುಲ್ಲಿನಿಂದ ತೈಲವನ್ನು ಹೊರತೆಗೆಯಲಾಗುತ್ತದೆ. ಒಂದು ವರ್ಷದಲ್ಲಿ ಒಂದು ತುಂಡು ಭೂಮಿಯಿಂದ ಸುಮಾರು 3 ರಿಂದ 5 ಲೀಟರ್ ತೈಲ ಹೊರಬರುತ್ತದೆ. ಇದರ ಮಾರಾಟ ದರ 1,000 ರಿಂದ 1,500 ರೂಪಾಯಿ.
ನಿಂಬೆ ಹುಲ್ಲು ನೆಟ್ಟ ನಂತರ 3 ರಿಂದ 5 ತಿಂಗಳ ನಂತರ ಅದರ ಮೊದಲು ಕೊಯ್ಲು ಮಾಡಲಾಗುತ್ತದೆ. ಮುರಿದಾಗ ನಿಂಬೆ ವಾಸನೆ ಬಂದ್ರೆ ಕೊಯ್ಲಿಗೆ ಯೋಗ್ಯವಾಗಿದೆ ಎಂದರ್ಥ. ನೆಲದಿಂದ 5 ರಿಂದ 8 ಇಂಚುಗಳಷ್ಟು ಕತ್ತರಿಸಿ.
ಒಂದು ಹೆಕ್ಟೇರ್ ನಿಂಬೆ ಹುಲ್ಲು ಕೃಷಿಗೆ ಆರಂಭದಲ್ಲಿ 30,000 ರಿಂದ 40,000 ರೂಪಾಯಿ ವೆಚ್ಚವಾಗುತ್ತದೆ. ಒಮ್ಮೆ ನಾಟಿ ಮಾಡಿದ ನಂತರ ವರ್ಷಕ್ಕೆ 3-4 ಬಾರಿ ಕೊಯ್ಲು ಮಾಡಬಹುದು. 3 ರಿಂದ 4 ಕೊಯ್ಲು ಮಾಡಿದ ನಂತರ ಸುಮಾರು 100 ರಿಂದ 150 ಲೀಟರ್ ತೈಲ ಹೊರಬರುತ್ತದೆ. ಇದ್ರಿಂದ ಬರುವ ಆದಾಯವು ವರ್ಷದಲ್ಲಿ 1 ಲಕ್ಷದಿಂದ 1.60 ಲಕ್ಷ ರೂಪಾಯಿಗಳವರೆಗೆ ಇರುತ್ತದೆ. ವೆಚ್ಚವನ್ನು ಕಡಿತಗೊಳಿಸಿದ ನಂತರ, ರೈತನು ಒಂದು ವರ್ಷದಲ್ಲಿ 70 ಸಾವಿರದಿಂದ 1.20 ಲಕ್ಷ ರೂಪಾಯಿಗಳವರೆಗೆ ಲಾಭ ಪಡೆಯಬಹುದು.