ಕೊರೊನಾ ಬಿಕ್ಕಟ್ಟಿನಲ್ಲಿ ಹಣದ ಸಮಸ್ಯೆ ಎದುರಾದ್ರೆ ಭಯಪಡುವ ಅಗತ್ಯವಿಲ್ಲ. ದೇಶದ ಅತಿದೊಡ್ಡ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಿಗೆ ಸಾಲಗಳನ್ನು ನೀಡುತ್ತಿದೆ. ಮನೆಯಲ್ಲೇ ಕುಳಿತು ಆನ್ಲೈನ್ ನಲ್ಲಿ ವೈಯಕ್ತಿಕ ಸಾಲವನ್ನು ಪಡೆಯಬಹುದು. ಕೇವಲ 4 ಸುಲಭ ಹಂತಗಳಲ್ಲಿ ಸಾಲ ಪಡೆಯಬಹುದು. ಯೋನೊ ಆಪ್ ಮೂಲಕ ಗ್ರಾಹಕರು ಸಾಲ ಪಡೆಯಬಹುದು.
ಎಸ್‌ಎಂಎಸ್ ಮೂಲಕ ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದು. ನೋಂದಾಯಿತ ಮೊಬೈಲ್ ಸಂಖ್ಯೆಯಿಂದ PAPL <space> <ಖಾತೆ ಸಂಖ್ಯೆ> ಕೊನೆಯ 4 ಅಂಕೆಗಳನ್ನು 567676 ಗೆ SMS ಮಾಡಬೇಕು. ಬ್ಯಾಂಕ್ ಕೆಲವೇ ಗಂಟೆಗಳಲ್ಲಿ ದಾಖಲೆ ಪರಿಶೀಲನೆ ಮಾಡಿ ಸಾಲ ನೀಡಲಿದೆ.
ಯೋನೊ ಅಪ್ಲಿಕೇಶನ್‌ಗೆ ಲಾಗ್ ಇನ್ ಮಾಡಿ. ನಂತರ Avail Now ಆಯ್ಕೆಯನ್ನು ಕ್ಲಿಕ್ ಮಾಡಿ. ನಂತರ ಸಾಲದ ಅವಧಿ ಮತ್ತು ಮೊತ್ತವನ್ನು ಆಯ್ಕೆ ಮಾಡಬೇಕಾಗುತ್ತದೆ. ಅಂತಿಮವಾಗಿ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಲಾದ ಒಟಿಪಿಯನ್ನು ನಮೂದಿಸಿ ಅಪ್ಲಿಕೇಷನ್ ಕಳುಹಿಸಿ.