ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಏರ್ಟೆಲ್ ಗ್ರಾಹಕರಿಗೆ ಬಂಪರ್ ಆಫರ್ ನೀಡ್ತಿದೆ. ಎಕ್ಸ್ಟ್ರೀಮ್ ಫೈಬರ್ ಹೋಮ್ ಬ್ರಾಡ್ಬ್ಯಾಂಡ್ ಸಂಪರ್ಕ ತೆಗೆದುಕೊಳ್ಳುವ ಗ್ರಾಹಕರಿಗೆ 1,000 ಜಿಬಿ ಹೆಚ್ಚುವರಿ ಡೇಟಾವನ್ನು ನೀಡುವ ಘೋಷಣೆ ಮಾಡಿದೆ.
ಏರ್ಟೆಲ್ ನ ಈ ಕೊಡುಗೆ ಸೀಮಿತ ಅವಧಿಗೆ ಮಾತ್ರ ಇರಲಿದೆ. ಎಲ್ಲಾ ಏರ್ಟೆಲ್ ಎಕ್ಸ್ಸ್ಟ್ರೀಮ್ ಫೈಬರ್ ಯೋಜನೆಗೆ ಇದು ಲಭ್ಯವಿರುತ್ತದೆ. ಅನಿಯಮಿತ ಡೇಟಾ ಮತ್ತು ಪ್ರಿಪೇಯ್ಡ್ ಬ್ರಾಡ್‌ಬ್ಯಾಂಡ್ ಯೋಜನೆಗಳಿಗೆ ಇದ್ರ ಲಾಭ ಸಿಗ್ತಿಲ್ಲ.
ದೆಹಲಿ, ಮುಂಬೈ ಮತ್ತು ಬೆಂಗಳೂರು ಸೇರಿದಂತೆ ಎಲ್ಲಾ ಪ್ರಮುಖ ನಗರಗಳಲ್ಲಿ ಈ ಆಫರ್ ಲಭ್ಯವಿರುತ್ತದೆ. ಕೊರೊನಾ ಹಿನ್ನಲೆಯಲ್ಲಿ ದೇಶದಲ್ಲಿ ವರ್ಕ್ ಫ್ರಂ ಹೋಮ್ ಕೆಲಸಕ್ಕೆ ಒತ್ತು ಸಿಕ್ಕಿದೆ. ಮಕ್ಕಳಿಗೆ ಆನ್ಲೈನ್ ಶಿಕ್ಷಣ ನೀಡಲಾಗ್ತಿದೆ. ಹಾಗಾಗಿ ಹೋಂ ಬ್ರಾಡ್ ಬ್ಯಾಂಡ್ ಗೆ ಬೇಡಿಕೆ ಹೆಚ್ಚಾಗಿದೆ. ಇದ್ರ ಲಾಭವನ್ನು ಪಡೆಯಲು ಏರ್ಟೆಲ್ ಈ ಆಫರ್ ನೀಡ್ತಿದೆ.