ಸ್ವಂತ ಸೂರು ಹೊಂದಬೇಕೆಂಬ ಕನಸು ಎಲ್ಲರಿಗೂ ಇರುತ್ತದೆ. ಆದರೆ ಇಂದಿನ ದುಬಾರಿ ದುನಿಯಾದಲ್ಲಿ ಈ ಕನಸು ಮರೀಚಿಕೆಯಾಗಿಯೇ ಉಳಿಯುತ್ತದೆ. ಇದೀಗ ದೇಶದ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗೃಹ ಸಾಲ ಪಡೆಯುವವರಿಗೆ ಸಿಹಿಸುದ್ದಿ ನೀಡಿದೆ.
ಹೌದು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗೃಹ ಸಾಲ ಬಡ್ಡಿ ದರವನ್ನು ಶೇಕಡ 0.70 ರಷ್ಟು ಇಳಿಕೆ ಮಾಡಿದ್ದು, ಇದರಿಂದಾಗಿ ಇದೀಗ ಬಡ್ಡಿದರ ಶೇಕಡಾ 6.70 ಆದಂತಾಗಿದೆ. ಈ ರಿಯಾಯಿತಿಯು ಸೀಮಿತ ಅವಧಿಯವರೆಗೆ ಮುಂದುವರೆಯಲಿದ್ದು, ಮಾರ್ಚ್ 31ರ ತನಕ ಮಾತ್ರ ಲಭ್ಯವಾಗಲಿದೆ.
ನಿರುದ್ಯೋಗಿಗಳಿಗೆ ಗುಡ್ ನ್ಯೂಸ್: ನಗದು ಪರಿಹಾರ ನೀಡಲು ಅರ್ಜಿ ಆಹ್ವಾನ
ಇದರ ಜೊತೆಗೆ ಸಂಸ್ಕರಣಾ ಶುಲ್ಕವನ್ನು ಸಹ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮನ್ನಾ ಮಾಡಲಿದ್ದು,75 ಲಕ್ಷ ರೂ. ತನಕದ ಸಾಲಕ್ಕೆ ಶೇಕಡ 6.70 ಮತ್ತು 75 ಲಕ್ಷ ರೂ. ಗಿಂತ ಅಧಿಕ ಸಾಲಕ್ಕೆ ಶೇಕಡ 6.75 ಬಡ್ಡಿದರ ನಿಗದಿಯಾಗಿದ್ದು, ಯೊನೋ ಆಪ್ ಬಳಸಿದರೆ ಶೇಕಡ 0.05 ರಷ್ಟು ಹೆಚ್ಚುವರಿ ರಿಯಾಯಿತಿ ಸಿಗಲಿದೆ. ಜೊತೆಗೆ ಮಹಿಳೆಯರು ಸಾಲ ಪಡೆದರೆ ಅವರಿಗೆ ಶೇಕಡಾ 0.05 ರಷ್ಟು ವಿಶೇಷ ರಿಯಾಯಿತಿ ದೊರೆಯಲಿದೆ.