ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ ಟಿ.ವಿಗಳೇ ಹೆಚ್ಚಾಗಿವೆ. ಇಂಟರ್ ನೆಟ್ ಸೌಲಭ್ಯ ಇಲ್ಲ ಅಂತ ಹಳೆಯ ಟಿ.ವಿ.ಯನ್ನು ಬಿಟ್ಟು ಸ್ಮಾರ್ಟ್ ಟಿವಿ ಖರೀದಿ ಮಾಡುವ ಎಷ್ಟೋ ಜನಕ್ಕೆ ಇದೊಂದು ಖುಷಿಯ ಸುದ್ದಿ. ನಿಮ್ಮ ಹಳೆಯ ಟಿ.ವಿಯಲ್ಲೇ ಇಂಟರ್ ನೆಟ್ ಲಭ್ಯವಾಗಲಿದೆ. ಅದು ಟಿ.ವಿ ಸ್ಟಿಕ್ ಮೂಲಕ. ಇಂಟರ್ ನೆಟ್ ಒದಗಿಸುವ ಈ ಸ್ಟಿಕ್ ಅನ್ನು ಶಿಯೋಮಿ ಕಂಪನಿ ಬಿಡುಗಡೆಗೊಳಿಸಿದೆ.
ಹೌದು, ಮಿ ಟಿವಿ ಸ್ಟಿಕ್ ಎಂಬ ಈ ಸಾಧನ ನಿಮ್ಮ ಟಿವಿಗೆ ಇಂಟರ್ ನೆಟ್ ಸೌಲಭ್ಯ ನೀಡಲಿದೆ. ಇದರ ಬೆಲೆ ಕೂಡ ತೀರ ಕಡಿಮೆ ಇದೆ. ಕೇವಲ 2799 ರೂಪಾಯಿಗೆಲ್ಲ ಈ ಸಾಧನ ನಿಮ್ಮ ಕೈ ತಲುಪಲಿದೆ. ಸಾವಿರಾರು ರೂಪಾಯಿ ಕೊಟ್ಟು ಸ್ಮಾರ್ಟ್ ಟಿ.ವಿ ಕೊಳ್ಳುವ ಬದಲು 2799 ರೂಪಾಯಿ ಕೊಟ್ಟು ಕೊಂಡರೆ ಆಯ್ತು. ಈ ಸ್ಟಿಕ್ ಅನ್ನು ಹೆಚ್ ಡಿ ಎಮ್ ಐ ಪೋರ್ಟ್ ಗೆ ಸಂಪರ್ಕಿಸಿದರೆ ಇಂಟರ್ ನೆಟ್ ಶೇರ್ ಮಾಡಬಹುದು.
ಇನ್ನು ಈ ಸ್ಟಿಕ್ ಮೂಲಕ ಆಪ್ ಕೂಡ ಡೌನ್‌ಲೋಡ್ ಮಾಡಬಹುದು. ಇದರಿಂದ ದೊಡ್ಡ ಪರದೆಯಲ್ಲಿ ಸಿನಿಮಾ ನೋಡಬಹುದು. ಇದರಲ್ಲಿ ಗೂಗಲ್ ವಾಯ್ಸ್ ಕಮಾಂಡ್ ಆಪ್ಷನ್ ಕೂಡ ಲಭ್ಯವಿದೆ. ಹೀಗಾಗಿ ಟೈಪ್ ಮಾಡುವ ಬದಲು ವಾಯ್ಸ್ ಮುಖಾಂತರವೇ ನಿಮಗೆ ಬೇಕಾದನ್ನು ನೋಡಬಹುದಾಗಿದೆ.