alex Certify ಸೈಕಲ್ ಬೆಲೆಗೆ ಸಿಗ್ತಿದೆ ಎಲೆಕ್ಟ್ರಿಕ್ ಸ್ಕೂಟರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೈಕಲ್ ಬೆಲೆಗೆ ಸಿಗ್ತಿದೆ ಎಲೆಕ್ಟ್ರಿಕ್ ಸ್ಕೂಟರ್

ಅಗ್ಗದ ಫೋನ್ ಹಾಗೂ ಎಲ್ ಇಡಿ ಟಿವಿ ನಂತ್ರ ಡೆಟೆಲ್ ಇಂಡಿಯಾ ಭಾರತ ಮಾರುಕಟ್ಟೆಯಲ್ಲಿ ದ್ವಿಚಕ್ರ ವಾಹನ ಬಿಡುಗಡೆ ಮಾಡಿದೆ. ಈ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಬಳಕೆಯಿಂದ ಪ್ರತಿ ಕಿಲೋಮೀಟರ್ ಗೆ ಕೇವಲ 20 ಪೈಸೆ ವೆಚ್ಚವಾಗಲಿದೆ ಎಂದು ಕಂಪನಿ ಹೇಳಿದೆ.

ಎಲೆಕ್ಟ್ರಿಕ್ ವಾಹನಕ್ಕೆ ಡೆಟೆಲ್ ಈಸಿ ಎಂದು ಹೆಸರಿಡಲಾಗಿದೆ. ಇದು ವಿಶ್ವದ ಅತ್ಯಂತ ಅಗ್ಗದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಎಂದು ಕಂಪನಿ ಹೇಳಿಕೊಂಡಿದೆ. ಈ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮೂರು ಬಣ್ಣದಲ್ಲಿ ಲಭ್ಯವಿದೆ.

ಡಿಟೆಲ್ ಈಜಿಯ ಬೆಲೆ ಕೇವಲ 19,999 ರೂಪಾಯಿ. ಕಂಪನಿಯ ಪ್ರಕಾರ ಅಗ್ಗದ ಬೆಲೆಗೆ ಎಲೆಕ್ಟ್ರಿಕ್ ವಾಹನ ಸಿಗುವ ಜೊತೆಗೆ ಬಳಕೆ ವೆಚ್ಚವೂ ಕಡಿಮೆ. ಇದನ್ನು ಕಂಪನಿ ವೆಬ್ಸೈಟ್ ನಿಂದ ಖರೀದಿ ಮಾಡಬಹುದು.

ಈ ಎಲೆಕ್ಟ್ರಿಕ್ ಸ್ಕೂಟರ್ ಓಡಿಸಲು ಯಾವುದೇ ಪರವಾನಗಿ ಅಗತ್ಯವಿಲ್ಲ. ಬೈಕ್ ನೋಂದಾಯಿಸುವ ಅಗತ್ಯವಿಲ್ಲ. ಡಿಟೆಲ್ ಈಸಿ, ಬ್ಯಾಟರಿಯನ್ನು ಸಂಪೂರ್ಣವಾಗಿ ಚಾರ್ಜ್ ಮಾಡಿದ ನಂತರ, ಅದು 60 ಕಿಲೋಮೀಟರ್ ವರೆಗೆ ಚಲಿಸುತ್ತದೆ. ಈ ದ್ವಿಚಕ್ರ ವಾಹನದ ವೇಗ ಗಂಟೆಗೆ 25 ಕಿಲೋಮೀಟರ್. ಇದರ ಬ್ಯಾಟರಿ 7 ರಿಂದ 8 ಗಂಟೆಗಳಲ್ಲಿ ಪೂರ್ಣ ಚಾರ್ಜ್ ಆಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...