ಬೀದಿ ಬದಿ ವ್ಯಾಪಾರಿಗಳಿಗೆ ನೆರವಾಗಲೆಂದು ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಆತ್ಮ ನಿರ್ಭರ ಯೋಜನೆಯನ್ನು ಜಾರಿಗೊಳಿಸಿದ್ದರೆ, ಈ ಹಿಂದೆ ರಾಜ್ಯದಲ್ಲಿ ಆಡಳಿತ ನಡೆಸಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಬಡಜನತೆಗೆ ನೆರವಾಗಲೆಂದು ‘ಬಡವರ ಬಂಧು’ ಹೆಸರಿನಲ್ಲಿ ಸಾಲ ಯೋಜನೆಯನ್ನು ಆರಂಭಿಸಿದ್ದರು.
ಆತ್ಮ ನಿರ್ಭರ ಯೋಜನೆಯಡಿ ಸಾಲ ಪಡೆಯಲು ಮುಂದಾದ ಬೀದಿಬದಿ ವ್ಯಾಪಾರಿಗಳಿಗೆ ಹಲವು ನಿಬಂಧನೆಗಳನ್ನು ವಿಧಿಸುತ್ತಿದ್ದು, ಇದರ ಮಧ್ಯೆ ಬಡಜನತೆಗೆ ಮತ್ತೊಂದು ಶಾಕಿಂಗ್ ಸುದ್ದಿ ಹೊರಬಿದ್ದಿದೆ. ಈ ಹಿಂದೆ ಕುಮಾರಸ್ವಾಮಿಯವರ ಸರ್ಕಾರ ಆರಂಭಿಸಿದ್ದ ‘ಬಡವರ ಬಂಧು’ ಯೋಜನೆಯನ್ನು ಈಗಿನ ರಾಜ್ಯ ಸರ್ಕಾರ ಸ್ಥಗಿತಗೊಳಿಸಿದೆ ಎಂದು ಹೇಳಲಾಗಿದೆ.
BPL, APL ಕಾರ್ಡ್ ಬೇಕಾದವರಿಗೆ ಗುಡ್ ನ್ಯೂಸ್: ಹೊಸ ಪಡಿತರ ಚೀಟಿಗಳಿಗೆ ಅರ್ಜಿ ಆಹ್ವಾನ
‘ಬಡವರ ಬಂಧು’ ಯೋಜನೆಯಡಿ ಸಹಕಾರ ಸಂಘಗಳಿಂದ 10 ಸಾವಿರ ರೂಪಾಯಿ ಬಡ್ಡಿ ರಹಿತ ಸಾಲವನ್ನು ನೀಡಲಾಗುತ್ತಿದ್ದು, ಇದನ್ನು ಪ್ರತಿದಿನ 50 ರೂಪಾಯಿ ಪಿಗ್ಮಿ ರೀತಿಯಲ್ಲಿ ಕಟ್ಟಿ ಸಾಲವನ್ನು ತೀರಿಸಬೇಕಾಗಿತ್ತು. ಇದೀಗ ಆ ಯೋಜನೆಯನ್ನೇ ಸ್ಥಗಿತಗೊಳಿಸಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.