ದೇಶದ ಎರಡನೇ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಪಂಜಾಬ್ ನ್ಯಾಷನಲ್ ಬ್ಯಾಂಕ್ ಗ್ರಾಹಕರಿಗೆ ಖುಷಿ ಸುದ್ದಿಯನ್ನು ನೀಡಿದೆ. ಬ್ಯಾಂಕ್, ಗೃಹ ಸಾಲ, ಕಾರ್ ಸಾಲ ಮತ್ತು ಇತರ ಪ್ರಮುಖ ಚಿಲ್ಲರೆ ಸಾಲಗಳಿಗೆ ಹೊಸ ವರ್ಷದ ಆಫರ್ ನೀಡಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕಿನಿಂದ ಗೃಹ ಸಾಲ, ಕಾರ್ ಸಾಲ ಅಥವಾ ದೊಡ್ಡ ಚಿಲ್ಲರೆ ಸಾಲವನ್ನು ತೆಗೆದುಕೊಂಡರೆ ಇನ್ಮುಂದೆ ಸಂಸ್ಕರಣಾ ಶುಲ್ಕ ಮತ್ತು ದಸ್ತಾವೇಜನ್ನು ಶುಲ್ಕವನ್ನು ಪಾವತಿಸಬೇಕಾಗಿಲ್ಲ.
ಈ ಹಿಂದೆ ಇದೇ ರೀತಿಯ ಆಫರನ್ನು ಬ್ಯಾಂಕ್ ಹಬ್ಬದ ಋತುವಿನಲ್ಲಿ ಘೋಷಣೆ ಮಾಡಿತ್ತು. ಸಾಲಗಳಿಗೆ ಬ್ಯಾಂಕ್ ಸಂಸ್ಕರಣಾ ಶುಲ್ಕ ಹಾಗೂ ದಾಖಲಾತಿ ಶುಲ್ಕವನ್ನು ಮನ್ನಾ ಮಾಡಿತ್ತು. ಈಗ ಹೊಸ ವರ್ಷಕ್ಕೆ ಮತ್ತೆ ಆಫರ್ ನೀಡಿದೆ. ಇದಕ್ಕೆ ಬ್ಯಾಂಕ್ ಹೊಸ ವರ್ಷದ ಬೊನಾನ್ಜಾ-2021 ಎಂದು ಹೆಸರಿಟ್ಟಿದೆ. ಮಾರ್ಚ್ 31ರವರೆಗೆ ಗ್ರಾಹಕರು ಇದ್ರ ಲಾಭ ಪಡೆಯಬಹುದಾಗಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ನ ಎಲ್ಲ ಶಾಖೆ ಹಾಗೂ ಆನ್ಲೈನ್ ಮೂಲಕ ಗ್ರಾಹಕರು ಇದ್ರ ಲಾಭ ಪಡೆಯಬಹುದು.
ಗ್ರಾಹಕರು ಅಗ್ಗದ ಬಡ್ಡಿ ದರದಲ್ಲಿ ಸಾಲ ಪಡೆಯಬಹುದಾಗಿದೆ. ಸಾಲದ ಮೊತ್ತದ ಶೇಕಡಾ 0.35 ರಷ್ಟು ಸಂಸ್ಕರಣಾ ಶುಲ್ಕವನ್ನು ಗ್ರಾಹಕರು ಪಾವತಿಸಬೇಕಾಗಿಲ್ಲ. ಕಾರು ಸಾಲವನ್ನು ತೆಗೆದುಕೊಳ್ಳುವ ಗ್ರಾಹಕರು ಒಟ್ಟು ಸಾಲದ ಶೇಕಡಾ 0.25 ರಷ್ಟು ಉಳಿತಾಯ ಮಾಡಬಹುದು.