ಕೇಂದ್ರ ಸರ್ಕಾರ ವಾಹನ ಚಾಲನಾ ಪರವಾನಿಗೆ ನವೀಕರಣ ಸೇರಿದಂತೆ ವಿವಿಧ ಸೇವೆಗಳನ್ನು ಸ್ಮಾರ್ಟ್ ಗೊಳಿಸಿದ್ದು, ಪ್ರಾದೇಶಿಕ ಸಾರಿಗೆ ಕಚೇರಿಗೆ ಭೇಟಿ ನೀಡದೆ ಆಧಾರ್ ದೃಢೀಕರಣದ ಮೂಲಕ ಈ ಸೇವೆಗಳನ್ನು ಸಾರ್ವಜನಿಕರು ಪಡೆಯಬಹುದಾಗಿದೆ.
ಆಧಾರ್ ದೃಢೀಕರಣದ ಮೂಲಕ ನೀಡುವ ಸೇವೆಗಳ ಈ ಕೆಳಕಂಡಂತಿದೆ.
* ಕಲಿಕಾ ಪರವಾನಿಗೆ (ಎಲ್ ಎಲ್ ಆರ್)
* ಚಾಲನಾ ಪರವಾನಗಿ ನವೀಕರಣ (ಡಿ ಎಲ್)
* ಚಾಲನಾ ಪರವಾನಗಿ ನಕಲು (ಡುಪ್ಲಿಕೇಟ್ ಡಿಎಲ್ ಪ್ರತಿ)
* ಡಿಎಲ್ ಮತ್ತು ನೋಂದಣಿ ದಾಖಲೆಗಳಲ್ಲಿನ ವಿಳಾಸ ಬದಲಾವಣೆ
* ವಾಹನದ ಆರ್.ಸಿ. ದಾಖಲೆಯನ್ನು ಮರಳಿಸುವುದು
* ಅಂತರ್ರಾಷ್ಟ್ರೀಯ ಚಾಲನಾ ಪರವಾನಿಗೆ
* ವಾಹನದ ತಾತ್ಕಾಲಿಕ ನೋಂದಣಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ
* ವಾಹನದ ನೋಂದಣಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ
* ವಾಹನ ನೋಂದಣಿ ದ್ವಿಪ್ರತಿ ಪ್ರಮಾಣಪತ್ರ ವಿತರಣೆಯ ಅರ್ಜಿ
* ಮೋಟಾರು ವಾಹನದ ಮಾಲೀಕತ್ವ ಕುರಿತಂತೆ ವರ್ಗಾವಣೆ ನೋಟಿಸ್
* ವಾಹನ ನೋಂದಣಿ ಪ್ರಮಾಣ ಪತ್ರಕ್ಕಾಗಿ ಎನ್ ಓ ಸಿ ಅನುಮತಿ
* ಮೋಟಾರು ವಾಹನ ಮಾಲೀಕತ್ವದ ವರ್ಗಾವಣೆ ಅರ್ಜಿ
* ಮಾನ್ಯತೆ ಪಡೆದ ಚಾಲಕ ತರಬೇತಿ ಕೇಂದ್ರದಿಂದ ತರಬೇತಿಗಾಗಿ ಚಾಲಕ ನೋಂದಣಿಗೆ ಅರ್ಜಿ
* ರಾಜತಾಂತ್ರಿಕ ಅಧಿಕಾರಿಯ ಮೋಟಾರು ವಾಹನಗಳ ನೋಂದಣಿ
* ಬಾಡಿಗೆ – ಖರೀದಿ ಒಪ್ಪಂದದ ಅನುಮೋದನೆ ಮತ್ತು ಒಪ್ಪಂದ ರದ್ದತಿ ಪ್ರಕ್ರಿಯೆ
* ರಾಜತಾಂತ್ರಿಕ ಅಧಿಕಾರಿಯ ಹೊಸ ಮೋಟಾರು ವಾಹನದ ನೋಂದಣಿ ಗುರುತು ನಿಯೋಜನೆ ಸೇವೆ