ಇಂದು ಸೆಪ್ಟೆಂಬರ್ ತಿಂಗಳು ಮುಗಿಯಲಿದೆ. ಅಕ್ಟೋಬರ್ ನಲ್ಲಿ ಅನೇಕ ನಿಯಮಗಳು ಬದಲಾಗಲಿವೆ. ಇವು ಜನಸಾಮಾನ್ಯರ ಮೇಲೆ ನೇರ ಪರಿಣಾಮ ಬೀರಲಿದೆ.
ಕೊರೊನಾ ಬಿಕ್ಕಟ್ಟಿನ ಮಧ್ಯೆ ಆದಾಯ ತೆರಿಗೆ ಪಾವತಿದಾರರಿಗೆ ಸರ್ಕಾರ ದೊಡ್ಡ ಪರಿಹಾರ ನೀಡಿತ್ತು. 2018-19ನೇ ಸಾಲಿನ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಕೊನೆಯ ದಿನಾಂಕವನ್ನು ಸೆಪ್ಟೆಂಬರ್ 30 ರವರೆಗೆ ವಿಸ್ತರಿಸಲಾಗಿತ್ತು. ಇದರ ಗಡುವು ಸಮೀಪಿಸುತ್ತಿದೆ. ನಂತ್ರ ರಿಟರ್ನ್ ಸಲ್ಲಿಸಲು ಸಾಧ್ಯವಿಲ್ಲ. ಸಾಮಾನ್ಯವಾಗಿ ನಿಗದಿತ ದಿನಾಂಕದೊಳಗೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸದಿದ್ದರೆ ದಂಡ ವಿಧಿಸಲಾಗುತ್ತದೆ.
ಆಧಾರ್ ಜೊತೆ ಪಡಿತರ ಚೀಟಿ ಲಿಂಕ್ ಮಾಡುವುದು ಅನಿವಾರ್ಯವಾಗಿದೆ. ಸೆಪ್ಟೆಂಬರ್ 30 ಕೊನೆ ದಿನವಾಗಿದೆ. ಲಿಂಕ್ ಮಾಡದೆ ಹೋದಲ್ಲಿ ಪಿಡಿಎಸ್ ಅಡಿಯಲ್ಲಿ ಅಗ್ಗದ ಆಹಾರ ಧಾನ್ಯಗಳು ಸಿಗುವುದಿಲ್ಲ.
ಪ್ರಧಾನಿ ಉಜ್ವಾಲ ಯೋಜನೆ ಅಡಿಯಲ್ಲಿ ಗ್ಯಾಸ್ ಸಂಪರ್ಕವನ್ನು ಉಚಿತವಾಗಿ ತೆಗೆದುಕೊಳ್ಳುವ ಪ್ರಕ್ರಿಯೆಯು ಸೆಪ್ಟೆಂಬರ್ 30ರಂದು ಕೊನೆಗೊಳ್ಳುತ್ತದೆ. ಕೊರೊನಾ ಸೋಂಕಿನಿಂದಾಗಿ ಕೇಂದ್ರ ಸರ್ಕಾರ ಪಿಎಂ ಉಜ್ವಾಲ ಯೋಜನೆ ದಿನಾಂಕವನ್ನು ಏಪ್ರಿಲ್ ನಿಂದ ಸೆಪ್ಟೆಂಬರ್ ವರೆಗೆ ವಿಸ್ತರಿಸಿದೆ. ಈ ಯೋಜನೆಯ ಲಾಭವನ್ನು ಪಡೆಯಲು ಬಯಸಿದರೆ, ಸೆಪ್ಟೆಂಬರ್ 30 ರ ಮೊದಲು ಪ್ರಧಾನ್ ಮಂತ್ರಿ ಉಜ್ವಾಲ ಯೋಜನೆ ಅಧಿಕೃತ ವೆಬ್‌ಸೈಟ್ pmujjwalayojana.com ಗೆ ಹೋಗಿ ಫಾರ್ಮ್ ಡೌನ್‌ಲೋಡ್ ಮಾಡಿ ಮತ್ತು ಅದನ್ನು ಹತ್ತಿರದ ಗ್ಯಾಸ್ ಏಜೆನ್ಸಿಗೆ ಸಲ್ಲಿಸಿ.
ಅಕ್ಟೋಬರ್ 1 ರಿಂದ ಟೆಲಿವಿಷನ್ ಖರೀದಿ ದುಬಾರಿಯಾಗಲಿದೆ. ಮಾಧ್ಯಮ ವರದಿಗಳ ಪ್ರಕಾರ, ಟಿವಿಗಳ ತಯಾರಿಕೆಯಲ್ಲಿ ಬಳಸುವ ವಸ್ತುಗಳ ಆಮದಿನ ಮೇಲಿನ ಶೇಕಡಾ 5 ರಷ್ಟು ಕಸ್ಟಮ್ಸ್ ಸುಂಕವನ್ನು ರದ್ದುಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ ಸರ್ಕಾರ ಒಂದು ವರ್ಷದ ವಿನಾಯಿತಿ ನೀಡಿದ್ದು, ಅದು ಸೆಪ್ಟೆಂಬರ್ 30 ಕ್ಕೆ ಕೊನೆಗೊಳ್ಳುತ್ತದೆ. ಟಿವಿಯ ಬೆಲೆ 600 ರೂಪಾಯಿಯಿಂದ 1,500 ರೂಪಾಯಿವರೆಗೆ ಹೆಚ್ಚಾಗಲಿದೆ.