ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಏರಿಕೆ ಕಾಣುತ್ತಿರುವ ಪೆಟ್ರೋಲ್ – ಡೀಸೆಲ್ ಬೆಲೆ ಇಂದೂ ಕೂಡ ಏರುಮುಖ ಮಾಡಿದ್ದು ಸಾರ್ವಜನಿಕರನ್ನು ಕಂಗಾಲಾಗುವಂತೆ ಮಾಡಿದೆ.
ಸತತ 20 ನೇ ದಿನವಾದ ಇಂದೂ ಕೂಡ ಪೆಟ್ರೋಲ್ ಬೆಲೆಯಲ್ಲಿ 21 ಪೈಸೆ ಏರಿಕೆಯಾಗಿದ್ದು, ಹೀಗಾಗಿ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 80.13 ರೂಪಾಯಿಗಳಾಗಿದೆ.
ಅದೇ ರೀತಿ ಡೀಸೆಲ್ ಬೆಲೆಯಲ್ಲಿ 17 ಪೈಸೆ ಏರಿಕೆಯಾಗಿದ್ದು, ನವದೆಹಲಿಯಲ್ಲಿ ಕೃತಿಯಲ್ಲಿ ಡೀಸೆಲ್ ಬೆಲೆ ಈಗ 8.19 ರೂಪಾಯಿಗಳಾಗಿದೆ. ಪೆಟ್ರೋಲ್ ಬೆಲೆಗಿಂತ ಡೀಸೆಲ್ ಬೆಲೆ ಇದೇ ಮೊದಲ ಬಾರಿಗೆ ಹೆಚ್ಚಾಗತೊಡಗಿದ್ದು, ಸಾರ್ವಜನಿಕ ಜನಜೀವನದ ಮೇಲೆ ತೀವ್ರ ಪರಿಣಾಮ ಬೀರಲಿದೆ.