ಸಾಂಬಾರ್ ಈರುಳ್ಳಿ ಬೆಳೆದಿದ್ದ ರೈತರು ಈ ಬಾರಿ ಅದಕ್ಕೆ ಸಿಗುತ್ತಿರುವ ಬೆಲೆಯಿಂದಾಗಿ ಸಂತಸಗೊಂಡಿದ್ದಾರೆ. ಕಳೆದ ವರ್ಷ ಕ್ವಿಂಟಾಲ್ ಈರುಳ್ಳಿಗೆ ಒಂದು ಸಾವಿರ ರೂ. ಲಭ್ಯವಾಗಿದ್ದರೆ ಈ ಬಾರಿ ಐದರಿಂದ ಆರು ಸಾವಿರ ರೂಪಾಯಿಗಳಿಗೆ ಮಾರಾಟವಾಗುತ್ತಿದೆ.
ಸಾಂಬಾರ್ ಈರುಳ್ಳಿ (ಸಣ್ಣೀರುಳ್ಳಿ) ಮಳೆ ಇಲ್ಲದ ಸಂದರ್ಭದಲ್ಲಿ ಬೆಳೆಯುವ ಕಾರಣ ಇದನ್ನು ಬೇಸಿಗೆ ಈರುಳ್ಳಿ ಎಂದು ಸಹ ಕರೆಯಲಾಗುತ್ತದೆ. ಈ ಬಾರಿ ಉತ್ತಮ ಇಳುವರಿ ಜೊತೆಗೆ ಒಳ್ಳೆಯ ಬೆಲೆಯೂ ಸಿಗುತ್ತಿರುವುದು ರೈತರ ಸಂತಸಕ್ಕೆ ಕಾರಣವಾಗಿದೆ.
ಈ ಬಾರಿ ತಮಿಳುನಾಡಿನಲ್ಲಿ ಭಾರಿ ಮಳೆಯಾದ ಕಾರಣ ಈರುಳ್ಳಿ ಬೆಳೆದ ಪ್ರದೇಶ ಕಡಿಮೆಯಾಗಿದ್ದು, ಇದರಿಂದಾಗಿ ಕರ್ನಾಟಕದ ರೈತರಿಂದ ವ್ಯಾಪಾರಸ್ಥರು ಐದರಿಂದ ಆರು ಸಾವಿರ ರೂಪಾಯಿಗಳಿಗೆ ಖರೀದಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.